ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣ: ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ರಾಮನಗರ : ಲವ್ ಯು ರಚ್ಚು ಸಿನಿಮಾ ಚಿತ್ರೀಕರದಲ್ಲಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ನ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಆದೇಶವನ್ನು ಹೊರಡಿಸಿದ್ದರಾರೆ.
ನಿನ್ನೆ ಬಿಡದಿಯಲ್ಲಿ ನಡೆದ ಚಿತ್ರದ ಶೂಟಿಂಗ್ ವೇಳೆ ನಡೆದ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೋಲೀಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಾಗಿತ್ತು. ಲವ್ ಯೂ ರಚ್ಚು ಸಿನಿಮಾ ಚಿತ್ರದ ನಿರ್ದೇಶಕ ಶಂಕರಯ್ಯ, ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ, ಚಿತ್ರದ ಸಾಹಸ ನಿರ್ದೇಶಕ ವಿನೋದ್ ಕುಮಾರ್, ಚಿತ್ರದ ಉಸ್ತುವಾರಿ ಫರ್ನಾಂಡಿಸ್ ಹಾಗೂ ಚಿತ್ರದ ಕ್ರೇನ್ ಅಪರೇಟರ್ ಮಹದೇವ್ ವಿರುದ್ಧ ಬಿಡದಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.
ಐವರು ಆರೋಪಿಗಳ ಪೈಕಿ ಬಂಧಿತರಾದ ನಿರ್ದೇಶಕ ಶಂಕರಯ್ಯ, ವಿನೋದ್ ಕುಮಾರ್, ಮಹದೇವ್ ರವರನ್ನ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ನಿನ್ನೆ ರಾಮನಗರದ ಬಿಡದಿ ಬಳಿ ಲವ್ ಯೂ ರಚ್ಚು ಚಿತ್ರ ಚಿತ್ರೀಕರಣ ವೇಳೆ ವಿದ್ಯುತ್ ಶಾಕ್ ನಿಂದ ಫೈಟರ್ ವಿವೇಕ್ ಸಾವನ್ನಪ್ಪಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಆ.24 ವರೆಗೆ ನ್ಯಾಯಾಂಗ ಬಂದನ ವಿಧಿಸಿ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಹಾಕಲಾಯಿತು.
ಲವ್ ಯೂ ರಚ್ಚು’ ಸಿನಿಮಾದಲ್ಲಿ ಅಜಯ್ ರಾವ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದು, ರಚಿತಾ ರಾಮ್ ಚಿತ್ರದ ನಾಯಕಿಯಾಗಿದ್ದಾರೆ. ಶಂಕರ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಗುರು ದೇಶಪಾಂಡೆ ಚಿತ್ರದ ನಿರ್ಮಾಪಕರಾಗಿದ್ದಾರೆ.
