ಜಿಲ್ಲಾ ಸುದ್ದಿರಾಜಕೀಯರಾಮನಗರ

ಪರೀಕ್ಷೆಯಲ್ಲಿ ಫೇಲಾದ ಸಿಪಿವೈ- ಮರು ವೌಲ್ಯಮಾಪನಕ್ಕೆ ಮುಂದಾದ ಸೈನಿಕ: ಸಚಿವ ಸ್ಥಾನ ಮಿಸ್ ಆದರೆ, ಪಕ್ಷಾಂತರ ಫಿಕ್ಸ್

ವರದಿ : ರಾಜೇಶ್ ಕೊಂಡಾಪುರ

ರಾಮನಗರ: ಪರೀಕ್ಷೆ ಬರೆದಿದ್ದೆನೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೆನೆ ಎನ್ನುತ್ತಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಈಗ ಫೇಲ್ ಆಗಿದ್ದಾರೆ. ಮರು ಏಣಿಕೆಗೆ ಅರ್ಜಿ ಸಲ್ಲಿಸಿ, ಮತ್ತೊಮ್ಮೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎನ್ನಬಹುದು.

ಬಿಜೆಪಿ ಸರಕಾರ ರಚನೆಗೊಂಡ ವರ್ಷಗಳ ಬಳಿಕ ಎಂಲ್‌ಸಿ ಆಗಿ, ಸಚಿವರು ಆಗಿದ್ದ ಸಿಪಿವೈ, ಅಂದಿನ ಸಿಎಂ ಯಡಿಯೂರಪ್ಪ ವಿರುದ್ಧವೇ ಬಂಡಾಯ ಎದ್ದಿದ್ದರು. ಇದರ ಫಲವಾಗಿ ಬಿಜೆಪಿ ಪಾಳಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯು ಆಯಿತು. ಹೀಗಾಗಿ ನಾನು ಪರೀಕ್ಷೆ ಬರೆದಿದ್ದೆನೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎನ್ನುತ್ತಿದ್ದರು. ಆದರೆ, ಹೊಸ ಸರಕಾರ ರಚನೆ ಬಳಿಕ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಿಪಿವೈ ಅನುರ್ತಿಣರಾಗಿದ್ದಾರೆ ಎಂದೇ ವ್ಯಾಖ್ಯಾನಿಸಬಹುದು.

ಹುಟ್ಟುಹಬ್ಬದೊಳಗೆ ಸಚಿವನಾಗುತ್ತೆನೆ..

ಸಚಿವ ಸ್ಥಾನ ಕೈ ತಪ್ಪಿದ ಬಳಿಕ 2 ದಿನಗಳ ಕಾಲ ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದ ಸೈನಿಕ, ನನ್ನ ಹುಟ್ಟುಹಬ್ಬದೊಳಗೆ (ಆಗಸ್ಟ್​​.29) ಸಚಿವನಾಗುತ್ತೇನೆ ಎನ್ನುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.

ಸಚಿವ ಸಂಪುಟದಲ್ಲಿ ಇನ್ನು ನಾಲ್ಕು ಮಂತ್ರಿಗಿರಿ ಸ್ಥಾನಗಳು ಖಾಲಿ ಉಳಿದಿವೆ. ಹೀಗಾಗಿ ಖಾತೆಗಾಗಿ ಸಿಪಿವೈ ಪ್ರಬಲ ಹೋರಾಟ ನಡೆಸುತ್ತಿದ್ದಾರೆ. ಇದಲ್ಲದೇ, ಸಂಕ್ರಾಂತಿಗೆ ಒಳಗಾಗಿ ಜಲಸಂಪನ್ಮೂಲ ಇಲ್ಲವೇ, ಇಂಧನ ಖಾತೆಗೆ ಲಾಭಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ಚನ್ನಪಟ್ಟಣ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದ ಸಿಪಿವೈ ಮೊದಲ ಭಾರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಕಸರತ್ತು ನಡೆಸಿದ್ದರು. ಆದರೆ, ಕಾಂಗ್ರೆಸ್ ನಿಂದ ಟಿಕೆಟ್ ಕೈತಪಿದ್ದರೂ, ಪಕ್ಷೇತರನಾಗಿ ನಿಂತು ಗೆಲುವು ಸಾಧಿಸಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಬಳಿಕವು ಕಾಂಗ್ರೆಸ್‌ನಿಂದಲೇ ಗೆಲುವು ಸಾಸಿದ್ದರು. ಅದಾದ ಬಳಿಕ ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಬಳಿಕ ಸಮಜವಾ ಪಕ್ಷದಿಂದ ಗೆಲುವು ಸಾಧಿಸಿ, ಬಿಜೆಪಿಯಿಂದ ಮತ್ತೊಮ್ಮೆ ಗೆದ್ದು ಅರಣ್ಯ ಸಚಿವರಾಗಿದ್ದರು. ಬಳಿಕ ಬಿಜೆಪಿಯಿಂದ ಸೋಲುಂಡಿದ್ದರು. ಈಗ ಚುನಾವಣೆಯಲ್ಲಿ ಗೆಲ್ಲದೇ ಎಂಎಲ್‌ಸಿ ಆಗಿ, ಸಚಿವರಾಗಿ ಕೆಲ ತಿಂಗಳಷ್ಟೆ ಅಧಿಕಾರದಲ್ಲಿದ್ದರು. ಈಗ ಅಲ್ಲಿಂದಲ್ಲೂ ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ. ಎಲ್ಲ ಪಕ್ಷಗಳನ್ನು ಸುತ್ತಿ ಬಂದಿರುವ ಸಿಪಿವೈ ಬಿಜೆಪಿಯಲ್ಲಿದ್ದರು, ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿದ್ದರಿಂದ ಸಚಿವ ಸ್ಥಾನ ಕೈ ತಪ್ಪಿದೆ ಎನ್ನಲಾಗುತ್ತಿದೆ.

ಹೀಗಾಗಿ ಸಚಿವ ಸ್ಥಾನಕ್ಕೆ ಹೈಕಮಾಂಡ್ ಮೊರೆ ಹೋಗಿರುವ ಸಿಪಿವೈಗೆ ಒಂದು ವೇಳೆ ಸಚಿವ ಸ್ಥಾನ ಕೈತಪ್ಪಿದರೆ, ಬಿಜೆಪಿ ವಿರುದ್ಧ ಬಂಡಾಯ ಹೇಳಬಹುದು. ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತ ಪಡಿಸಬಹುದು. ಇಲ್ಲವೇ, ಮುಂದಿನ ಚುನಾವಣೆಯೊಳಗೆ ಪಕ್ಷೇತರನಾಗಿ ರ್ಸ್ಪಸಬಹುದು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಸಿಪಿವೈ ಮತ್ತೆ ಕಾಂಗ್ರೆಸ್ ಕೈ ಹಿಡಿಯಲು ಪ್ರಯತ್ನಿಸಬಹುದು. ಆದರೆ, ಡಿಕೆ ಸಹೋದರರು ಇದಕ್ಕೆ ವಿರೋಧ ವ್ಯಕ್ತ ಪಡಿಸುವುದರಲ್ಲಿ ಎರಡು ಮಾತಿಲ್ಲ. ಇನ್ನೊಂದೆಡೆ ಸಿಪಿವೈ ರಾತ್ರೋ ರಾತ್ರಿ ಬಂದು ನನ್ನ ಕಾಲು ಹಿಡಿದು ಪಕ್ಷಕ್ಕೆ ಬರುತ್ತೇನೆ ಎಂದಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ವರ್ಷಗಳ ಹಿಂದೇ ಹೇಳಿದ್ದರು. ಹೀಗಾಗಿ ಕಾಂಗ್ರೆಸ್ ಸೇರಿದರೂ ಅಚ್ಚರಿ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಕಂಡರೆ ಕೆಂಡ ಕಾರುವ ಸಿಪಿವೈ ಜೆಡಿಎಸ್ ಪಕ್ಷಕ್ಕೆ ಹೋಗುವುದು ಅಸಾಧ್ಯವಾದ ಮಾತು.

ಸಚಿವ ಸ್ಥಾನ ಏಕೆ?

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟಿಸಲು ಸಿಪಿವೈ ಏನು ಮಾಡಿದ್ದಾರೆ ? ತನ್ನ ಸ್ವತಃ ಕ್ಷೇತ್ರವಾದ ಚನ್ನಪಟ್ಟಣ ನಗರಸಭೆ ಚುನಾವಣೆಯಲ್ಲಿ 31 ವಾರ್ಡ್‌ಗಳಲ್ಲಿಯು ಅಭ್ಯರ್ಥಿಗಳನ್ನು ನಿಲ್ಲಿಸುವಲ್ಲಿಯು ಸಿಪಿವೈ ಸೋತಿದ್ದರು. ಇನ್ನು 2019 ರಲ್ಲಿ ನಡೆದ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸಿಪಿವೈ ಸೂಚಿಸಿದ್ದ ಬಿಜೆಪಿ ಅಭ್ಯರ್ಥಿಯನ್ನೆ ಡಿಕೆ ಸಹೋದರರು ಹೈಜಾಕ್ ಮಾಡಿದ್ದರು. ಹೀಗೆ ಬಿಜೆಪಿ ವರ್ಚಸ್ಸು ಹೆಚ್ಚಿಸುವಲ್ಲಿ ಸಿಪಿವೈ ಸೋಲುತ್ತಲೇ ಬರುತ್ತಿರುವುದು ಅವರಿಗೊಂದು ದೊಡ್ಡ ಹೊಡೆತ ನೀಡಿದಂತ್ತಾಗಿದೆ. ಇದರೊಂದಿಗೆ ರಮೇಶ್ ಜಾರಕಿಹೊಳಿ ತಂಡಲದಲ್ಲಿದ್ದ ಸಿಪಿವೈಗೆ ಸಚಿವ ಸ್ಥಾನ ಮಿಸ್ ಆದರೆ, ಪಕ್ಷಾಂತರಗೊಳ್ಳುವ ಎಲ್ಲ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಸಿ ಪಿ ಯೋಗೇಶ್ವರ್​​ ಅವರು ಪಕ್ಷ ಬಿಟ್ಟರೆ, ಬಿಜೆಪಿಗೆ ಅಷ್ಟು ದೊಡ್ಡ ಮಟ್ಟದ ಹೊಡೆತ ಬೀಳುವುದಿಲ್ಲ ಎನ್ನುತ್ತಾರೆ ಬಿಜೆಪಿ ಮುಖಂಡರು.

Spread the love

Related Articles

Leave a Reply

Your email address will not be published. Required fields are marked *

Back to top button