ಚಿಕ್ಕಮಗಳೂರುಜಿಲ್ಲಾ ಸುದ್ದಿ
King Cobra : ಉಡವನ್ನೇ ನುಂಗಿದ ಕಾಳಿಂಗ ಸರ್ಪ

ಚಿಕ್ಕಮಗಳೂರು: ಕಾಳಿಂಗ ಸರ್ಪದ ರೌದ್ರಾವತಾರ ಕಂಡು ಜನ ಒಂದುಕ್ಷಣ ಬೆಚ್ಚಿಬಿದ್ದಿದ್ದಾರೆ. ಕಾಳಿಂಗ ಸರ್ಪ ದೊಡ್ಡ ಉಡವನ್ನೇ ಹಿಡಿದು ನುಂಗಿದ ಅಪರೂಪದ ಘಟನೆ ದುರ್ಗದಹಳ್ಳಿಯಲ್ಲಿ ನಡೆದಿದೆ.
ದುರ್ಗದಹಳ್ಳಿಯಲ್ಲಿ ತೇಜಸ್ವಿ ಎಂಬುವವರಿಗೆ ಸೇರಿದ ಕೊಡಿಗೆ ಎಸ್ಟೇಟ್ನಲ್ಲಿ ಈ ಘಟನೆ ಕಾಣಲು ಸಿಕ್ಕಿದೆ. ದೊಡ್ಡ ಉಡವನ್ನು ನುಂಗುತ್ತಿರುವ ಭಯಾನಕ ದೃಶ್ಯವನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ನುಂಗಿದ ಬಳಿಕ ಕಾಳಿಂಗ ಕಾಡಿನೊಳಗೆ ಹೋಗಿದೆ.
ಉಡ ಶಕ್ತಿಯುತ ಜೀವಿ. ಛತ್ರಪತಿ ಶಿವಾಜಿ ಕಾಲದಲ್ಲಿ ಬೆಟ್ಟ ಹತ್ತಲು, ಕೋಟೆಗಳಿಗೆ ಲಗ್ಗೆಯಿಡಲು, ಯುದ್ಧದ ಸಂದರ್ಭಗಳಲ್ಲಿ ಉಡಗಳನ್ನು ಬಳಸುತ್ತಿದ್ದರು ಎಂಬುದು ಇತಿಹಾಸ.




