ಮೈಸೂರು

ಮೈಸೂರು ಮ್ಯೂಸಿಯಮ್​ನಲ್ಲಿ ಶತಮಾನದಷ್ಟು ಹಳೆಯ ತೂಕದ ಯಂತ್ರ

ಮೈಸೂರು: ರಾಜರಾಳಿದ ನಾಡು ಮೈಸೂರಿನಲ್ಲಿ ಇರುವ ರೈಲು ವಸ್ತು ಸಂಗ್ರಹಾಲಯ ಈಗ ಮತ್ತಷ್ಟು ಮೆರುಗು ಮತ್ತು ಬೆರಗನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ ಒಂದು ಶತಮಾನಕ್ಕೂ ಹೆಚ್ಚು ಹಳೆದಾದ ಅತ್ಯಾಕರ್ಷಕ ಮಾದರಿಯಲ್ಲಿ ಇರುವ ಬ್ರಿಟಿಷರಿಗೆ ಸೇರಿದ ಕಂಪನಿಯೊಂದು ತಯಾರಿಸಿದ್ದ ತೂಕ ಮಾಡುವ ಯಂತ್ರ.ಈಗ ಸಂಗ್ರಹಾಲಯಕ್ಕೆ ಸೇರ್ಪಡೆಯಾಗಿರುವುದು.

ಕೊರೋನ ಕಾಟದಿಂದ ಜಾರಿಯಾಗಿದ್ದ ಲಾಕ್‌ಡೌನ್‌ ಮುಗಿದಿದ್ದು, ಈಗ ತೆರೆದಿರುವ ಮೈಸೂರು ರೈಲು ವಸ್ತುಸಂಗ್ರಹಾಲಯವು ಹಲವಾರು ಹೊಸ ಕಲಾಕೃತಿಗಳು ಮತ್ತು ವೈಶಿಷ್ಟ್ಯಗಳನ್ನು ತನ್ನ ಸಂಗ್ರಹಕ್ಕೆ ತೂಕದ ಯಂತ್ರವನ್ನು ಸೇರಿಸಿಕೊಂಡಿದೆ.

ರೈಲ್ವೆ, ಕಬ್ಬಿಣದ ಕಾರ್ಖಾನೆ, ಕಲ್ಲಿದ್ದಲು ಗಣಿ ಇತ್ಯಾದಿಗಳಲ್ಲಿ ಉಪಯೋಗಿಸುವ ತೂಕದ ಉಪಕರಣಗಳ ಪ್ರತಿಯೊಂದು ವಸ್ತುಗಳ ಪೇಟೆಂಟ್ ಮತ್ತು ತಯಾರಕರಾಗಿದ್ದ ಬರ್ಮಿಂಗ್ಯಾಮ್ ನ ಬ್ರಿಟಿಷ್ ತಯಾರಕರಾದ ‘ಡಬ್ಲ್ಯೂ & ಟಿ ಅವೆರಿ ಲಿಮಿಟೆಡ್’ 1907ರಲ್ಲಿ ತಯಾರಿಸಿದ್ದ ಯಂತ್ರ ಇದು. ಒಂದು ಶತಮಾನದಷ್ಟು ಹಳೆಯದಾದ ಇದರಲ್ಲಿ 250 ಕೆಜಿ ಸಾಮರ್ಥ್ಯದ ವಸ್ತುಗಳನ್ನು ತೂಕ ಮಾಡಬಹುದು. ರೈಲುಗಳಲ್ಲಿ ಸಾಗಿಸಲು ತರಲಾದ ಪಾರ್ಸೆಲ್‌ಗಳು ಮತ್ತು ಸಾಮಾನುಗಳನ್ನು, ಕಳುಹಿಸುವವರ ಸಮ್ಮುಖದಲ್ಲಿಯೇ ತೂಕ ತಪಾಸಣೆ ಮಾಡಿಸುವುದು ಕಡ್ಡಾಯವಾಗಿತ್ತು.

ಆದ್ದರಿಂದ ವಸ್ತುಗಳನ್ನು ತೂಕಹಾಕಲು ಈ ಕಂಪನಿಯ ವಿಭಿನ್ನ ಸಾಮರ್ಥ್ಯಗಳ -250 ಕೆಜಿಯಿಂದ 1000 ಕೆ.ಜಿ.ವರೆಗೆ – ತೂಕದ ಯಂತ್ರಗಳು ಹೆಚ್ಚಿನ ರೈಲ್ವೆ ನಿಲ್ದಾಣಗಳಲ್ಲಿ ಇರುತ್ತಿದ್ದವು. ಇದನ್ನು ಈಗ ರೈಲು ಸಂಗ್ರಹಾಲಯದ ಆಟಿಕೆ ರೈಲು ನಿಲ್ದಾಣದಲ್ಲಿ ಇರಿಸಲಾಗಿದೆ. ಇದು ಪ್ರಾಸಂಗಿಕವಾಗಿ ಮೈಸೂರು ರಾಜ್ಯ ರೈಲ್ವೆ (ಎಂಎಸ್ಆರ್) ಸಮಯದಲ್ಲಿ ನಿರ್ಮಿಸಲಾದ ನಿಲ್ದಾಣಗಳ ಪ್ರತಿರೂಪವಾಗಿದೆ.

ಹುಲ್ಲುಹಾಸಿನ ಹಾನಿಯನ್ನು ತಡೆಗಟ್ಟಲು ಹಾದಿಗಳಲ್ಲಿ ರೈಲು ಸೇವೆಯಿಂದ ಬಿಡುಗಡೆಯಾದ ಮರದ ಸ್ಲೀಪರ್‌ಗಳನ್ನು ಒದಗಿಸುವುದರ ಜೊತೆಗೆ, ಪೀಠೋಪಕರಣಗಳ ಬಳಿ ಇರುವ ಜನಪ್ರಿಯ ಸೆಲ್ಫಿ ಪಾಯಿಂಟ್‌ಗಳಲ್ಲಿ ಮರದ ಪೀಠಗಳನ್ನು ಇರಿಸಲಾಗಿದೆ. ಬಾಂಬೆ ಬರೋಡಾ ಮತ್ತು ಸೆಂಟ್ರಲ್ ಇಂಡಿಯಾ ರೈಲ್ವೆ (ಬಿಬಿ ಮತ್ತು ಸಿಐಆರ್) ಸಂಸ್ಥೆಯು ತನ್ನ ಉದ್ಯೋಗಿಯೊಬ್ಬರಿಗೆ 1931 ರಲ್ಲಿ ನೀಡಿರುವ ಸೇವಾ ಪ್ರಮಾಣಪತ್ರದ ಹಸ್ತಪ್ರತಿಯು ಒಳಾಂಗಣ ಗ್ಯಾಲರಿಯ ಗೋಡೆಯನ್ನು ಅಲಂಕರಿಸಲಾಗಿದೆ.

ಹಿಂದಿನ ಯುಗದ ಗತವೈಭವವನ್ನು ಪುನರುಜ್ಜೀವನಗೊಳಿಸುತ್ತದೆ. ಟಿಕೆಟ್ ನೀಡುವ ಪ್ರದೇಶದಲ್ಲಿ ಸಂದರ್ಶಕರ ಕ್ರಮಬದ್ಧ ಚಲನೆಗೆ ‘ಕ್ಯೂ’ ವ್ಯವಸ್ಥೆಯ ಅನುಕೂಲತೆ, ಸ್ವಚ್ಛತಾ ಮತ್ತು ಭದ್ರತಾ ಸೇವೆ, ವಸ್ತುಸಂಗ್ರಹಾಲಯದ ಉಲ್ಲೇಖ ಗ್ರಂಥಾಲಯದಲ್ಲಿ ಹೆಚ್ಚಿನ ಇತಿಹಾಸ ಪುಸ್ತಕಗಳು, ಇತ್ಯಾದಿಗಳು ವಸ್ತುಸಂಗ್ರಹಾಲಯವನ್ನು ಕ್ರಮೇಣ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲು ರೈಲ್ವೆ ಆಡಳಿತ ವರ್ಗ ಕ್ರಮ ತೆಗೆದುಕೊಂಡಿದೆ.

ಇದರಿಂದ ಹಿಂದಿನ ಯುಗದ ಗತ ವೈಭವವನ್ನು ಮರು ಕಳಿಸುವ ಪ್ರಯತ್ನ ಮಾಡಲಾಗಿದೆ.ಪ್ರಾರಂಭಿಸಿರುವ ಹೊಸ ಕ್ರಮಗಳಾಗಿವೆ.

Spread the love

Related Articles

Leave a Reply

Your email address will not be published. Required fields are marked *

Back to top button