Jds Workshop: ನಾಳೆಯಿಂದ 4 ದಿನ ಜೆಡಿಎಸ್ ವಿಷನ್-123 ಕಾರ್ಯಗಾರ: ಕುಮಾರಸ್ವಾಮಿ

ರಾಮನಗರ: ಸೋಮವಾರದಿಂದ (ಸೆ.27) ಇಲ್ಲಿನ ಬಿಡದಿ-ಕೇತಗಾನಹಳ್ಳಿ ತಮ್ಮ ತೋಟದ ಮನೆಯಲ್ಲಿ 4 ದಿನಗಳ ಕಾಲ ಜೆಡಿಎಸ್ ಮಿಷನ್ -123 ಕಾರ್ಯಾಗಾರಕ್ಕೆ ಚಾಲನೆ ಸಿಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿ, ಕೇತಗಾನಹಳ್ಳಿಯ ತಮ್ನ ತೋಟದ ಮನೆಯಲ್ಲಿ ನಡೆಯಲಿರುವ ಕಾರ್ಯಗಾರಸಲ್ಲಿ 123 ಜನ ಜೆಡಿಎಸ್ ಅಭ್ಯರ್ಥಿಗಳ ಹೆಸರುಗಳನ್ನು ಕಾರ್ಯಗಾರದಲ್ಲಿ ಘೋಷಣೆಯಾಗುವುದೆಂದರು.
123 ಜನರಿಗೆ ಗ್ರೀನ್ ಕಾರ್ಡ್ ವಿತರಣೆ ಮಾಡಲಿದ್ದು, ಮುಂದಿನ ಜನವರಿವರೆಗೆ ಆ ಅಭ್ಯರ್ಥಿಗಳ ಕಾರ್ಯತ್ಪರತೆ, ಮತ್ತು ದಕ್ಷತೆಯನ್ನು ವೀಕ್ಷಣೆ ಮಾಡಲಾಗುತ್ತೆ. ನಂತರ ಅವರ ಕಾರ್ಯ, ಸಂಘಟನೆ ನೋಡಿ ಎಲ್ಲೋ – ರೆಡ್ ಕಾರ್ಡ್ ಜನನವನ್ನು ಮಾಡಲಾಗುವುದೆಂದು ವಿವರಿಸಿದರು.
ಈಗಾಗಲೇ ತೋಟದ ಮನೆಯಲ್ಲಿ ತಯಾರಿ ಕಾರ್ಯ ನಡೆಯುತ್ತಿದ್ದು, ರಾಜ್ಯದ ಎಲ್ಲಾ ಕ್ಷೇತ್ರದ ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ, ಮಾಜಿ ಪ್ರಧಾನಿಗಳು ಆದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ದೇವೇಗೌಡರ ನೇತೃತ್ವದಲ್ಲೇ ಜೆಡಿಎಸ್ ಕಾರ್ಯಗಾರ ನಡೆಯಲಿದ್ದು, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಸಹ ಕಾರ್ಯಗಾರದಲ್ಲಿ ಭಾಗಿಯಾಲಿದ್ದಾರೆಂದು ಹೆಚ್ಡಿಕೆ ತಿಳಿಸಿದರು.
ಹೋರಾಟಕ್ಕೆ ಬೆಂಬಲ:
ಸೋಮವಾರ ನಾಳೆ ನಡೆಯಲಿರುವ ಭಾರತ ಬಂದ್ ಗೆ ಜೆಡಿಎಸ್ ವತಿಯಿಂದ ಬೆಂಬಲವಿದೆ. ರೈತರ ಹಿತದೃಷ್ಟಿಯಿಂದ ಯಾವುದೇ ಹೋರಾಟ ಮಾಡಿದ್ರು ನನ್ನ ಬೆಂಬಲವಿದೆ. ನಾಳೆ ನಡೆಯುವ ಬಂದ್ ಗೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲ ಇದೆ ಎಂದು ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.



