ನಾಳೆಯ ಭಾರತ ಬಂದ್ಗೆ ಜನತೆ ಬೆಂಬಲ ನೀಡಬಾರದು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ: ಭಾರತ ಬಂದ್ ಇದೊಂದು ರಾಜಕೀಯ ಹಿತಾಸಕ್ತಿಗಳಿಂದ ನಡೆಯುತ್ತಿರುವ ಬಂದ್ ಆಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಯಾವ ಕಾನೂನುಗಳನ್ನು, ಕೃಷಿ ರಿಫಾರ್ಮ್ಗಳನ್ನು ಮಾಡುತ್ತೇವೆ ಎಂದು ಹೇಳಿತೋ, ಅದನ್ನೇ ನಾವು ಮಾಡಿ ತೋರಿಸಿದ್ದೇವೆ. ಆದರೆ ಇವುಗಳನ್ನು ತರಲು ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು ಇರಲಿಲ್ಲ ಹಾಗೂ ಬದ್ಧತೆಯು ಇರಲಿಲ್ಲ. ದೇಶದಲ್ಲಿ ಬಹುತೇಕರು ಕೃಷಿ ಬದಲಾವಣೆಯನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಬಂದ್ ಕರೆ ನೀಡಿದವರಿಗೆ ಟಾಂಗ್ ನೀಡಿದ್ದರು.
ಧಾರವಾಡ ರೈಲ್ವೆ ಸ್ಟೇಷನ್ ಕಟ್ಟಡ ವೀಕ್ಷಣೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿಯನ್ನು ಈಗಾಗಲೇ ದೇಶದ ಜನ ಒಪ್ಪಿಕೊಂಡಿದ್ದಾರೆ. ಆರಂಭದ ಸಂದರ್ಭದಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ಕುರಿತು ತಪ್ಪು ತಿಳುವಳಿಕೆ ಇಂದಾಗಿ ಕೇಲವರು ವಿರೋಧ ಮಾಡಿದ್ದರು. ಈಗ ಪಂಜಾಬ್ ದಲ್ಲಿ ಕೂಡ ಎಮ್ಎಸ್ಪಿ ಪ್ರೈಸ್ ಮೊದಲು ನಾವು ಕೊಡ್ತಾ ಇದ್ದೇವು, ಅದು ಎಜೆಂಟರ್ ಮೂಲಕ ಹೋಗುತ್ತಿತ್ತು. ಈಗ ನೇರವಾಗಿ ರೈತರ ಅಕೌಂಟಿಗೆ ಹೋಗುತ್ತಿದೆ. ಅಲ್ಲಿಯೂ ಈ ಕಾನೂನಿನ ಅವಶ್ಯಕತೆ ಏನು ಅನ್ನೋದು ಅವರಿಗೆ ಗೊತ್ತಾಗುತ್ತಿದೆ. ಹಾಗಾಗಿ ಶೀಘ್ರದಲ್ಲೇ ಎಲ್ಲ ಸರಿ ಹೋಗುತ್ತದೆ. ಇಡೀ ದೇಶದಲ್ಲಿ ಬಂದ್ ನ ಪರಿಣಾಮ ಆಗುವುದಿಲ್ಲ. ಜನರು ಯಾವುದೇ ರೀತಿ ಇದಕ್ಕೆ ಬೆಂಬಲ ಕೊಡಬಾರದು. ದೇಶದ ಹಿತದೃಷ್ಟಿಯಿಂದ ಕಾನೂನು ಮಾಡಿದ್ದೇವೆ ಎಂದರು.
ಸದ್ಯದಲ್ಲಿ ಅವಳಿನಗರ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಟೆಂಡರ್ :
ಧಾರವಾಡ ನರೇಂದ್ರ ದಿಂದ ಹುಬ್ಬಳ್ಳಿ ಗಬ್ಬೂರ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಟೆಂಡರ್ ಸದ್ಯದಲ್ಲಿಯೇ ಆಗಲಿದೆ. ಅಲ್ಲಿ ಸಾಕಷ್ಟು ಸಮಸ್ಯಗಳು ಇದ್ದವುಣ ಅವು ಕೂಡಾ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಹೆದ್ದಾರಿ ಅಗಲೀಕರಣ ಕುರಿತು ಈಗಾಗಲೇ ಪ್ರಕ್ರಿಯೆ ಆರಂಭವಾಗಿವೆ. ಭೂ ಸ್ವಾಧೀನ ಪ್ರಕ್ರಿಯೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದರು.
ವಾರ, ಹತ್ತುದಿನಗಳಲ್ಲಿ ರೈಲ್ವೆ ನಿಲ್ದಾಣ ಉದ್ಘಾಟನೆ:
ಧಾರವಾಡ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಹಾಗೂ ಮುಖ್ಯ ಕಟ್ಟಡವನ್ನು ಏರ್ಪೋರ್ಟ್ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. 2016-17 ರಲ್ಲಿ ಇದಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗ ತುಂಬಾ ಒಳ್ಳೆಯ ರೀತಿಯಲ್ಲಿಕೆಲಸಗಳ ಆಗಿವೆ. ಈಗಾಗಲೇ ಉದ್ಘಾಟನೆಯ ಕುರಿತು ಕೇಂದ್ರ ರೈಲ್ವೆ ಮಂತ್ರಿಗಳೊಂದಿಗೆ ಮಾತನಾಡಲಾಗಿದೆ. ಅವರು ಬರುತ್ತೇವೆ ಅಂದರೆ ಕಾಯಲಾಗುವುದು. ಇಲ್ಲವಾದಲ್ಲಿ ವಾರ ಹತ್ತು ದಿನಗಳಲ್ಲಿ ರೈಲ್ವೆ ನಿಲ್ದಾಣ ಕಟ್ಟಡವನ್ನು ಉದ್ಘಾಟನೆ ಮಾಡಲಾಗುವುದು ಎಂದರು.



