ಮಂಡ್ಯ

ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರಲ್ಲಿ ನೆಮ್ಮದಿ

ಮಂಡ್ಯ : ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರಲ್ಲಿ ನೆಮ್ಮದಿ ತಂದ ಘಟನೆ ನಾಗಮಂಗಲ ತಾಲೂಕಿನ ಮಂಥನಹಳ್ಳಿಯಲ್ಲಿ ನಡೆದಿದೆ.

ಕಳೆದ 15 ದಿನಗಳಿಂದ ಮಂಥನಹಳ್ಳಿ ಸೇರಿದಂತೆ ಸುತ್ತಮುತ್ತಲ ಐದಾರು ಗ್ರಾಮಗಳಲ್ಲಿ ಚಿರತೆಯೊಂದು ಉಪಟಳ ನೀಡುತ್ತಿತ್ತು. ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಬೋನಿಟ್ಟಿತ್ತು. ಇಂದು ಚಿರತೆ ಬೋನಿಗೆ ಬಿದ್ದ ಪರಿಣಾಮ ಸುತ್ತಮುತ್ತಲ ಗ್ರಾಮಸ್ಥರಲ್ಲಿ ನೆಮ್ಮದಿ ಮೂಡಿದಂತಾಗಿದೆ. ಬೋನಿಗೆ ಬಿದ್ದ ಚಿರಯೆಯನ್ನು ಅರಣ್ಯಾಧಿಕಾರಿಗಳು ಕಾಡಿಗೆ ಬಿಡುವುದಾಗಿ ತಿಳುಸಿದ್ದಾರೆ. ಒಟ್ಟಾರೆ ಕಳೆದ ಹದೈದು ದಿನಗಳಿಂದ ಇದ್ದ ಆತಂಕ ಗ್ರಾಮಸ್ಥರಲ್ಲಿ ದೂರಾಗಿರೋದು ಸಂತಸದ ಸಂಗತಿ.

Related Articles

Leave a Reply

Your email address will not be published. Required fields are marked *

Back to top button