ಮಂಡ್ಯ
ಮಳೆಗೆ ಕುಸಿದ ಮನೆ; ಬೀದಿಗೆ ಬಿದ್ದ ವೃದ್ದೆ

ಮಂಡ್ಯ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದ್ದು, ವೃದ್ದೆಯೊಬ್ಬರು ಬೀದಿಪಾಲಾಗಿರುವ ಘಟನೆ ಶ್ರೀರಂಗಪಟ್ಟಣದ ಗಂಜಾಂನಲ್ಲಿ ನಡೆದಿದೆ.
ಕಲ್ಯಾಣಮ್ಮ ಎಂಬುವರಿಗೆ ಸೇರಿದ ಮನೆಯಾಗಿದ್ದು, ಮಳೆಯಿಂದಾಗಿ ರಾತ್ರಿ ಗೋಡೆಯೊಂದು ಸಂಪೂರ್ಣ ಕುಸಿದು ಬಿದ್ದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಮನೆಯಲ್ಲಿದ್ದ ಪದಾರ್ಥಗಳು, ದವಸ ಧಾನ್ಯ ನಾಶವಾಗಿವೆ. ತೀರಾ ಬಡ ವೃದ್ಧೆ ಮನೆಯ ಗೋಡೆ ಕುಸಿತದಿಂದ ಕಂಗಾಲಾಗಿದ್ದಾರೆ. ಮುಂದಿನ ಜೀವನ ತೋಚದೆ, ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ. ಶೀಘ್ರ ಸಂಬಂದಪಟ್ಟ ಇಲಾಖೆ ವೃದ್ದೆಯ ಆಶ್ರಯಕ್ಕೆ ಬರುವುದೇ ಕಾದು ನೋಡಬೇಕಿದೆ.




