ಕೊರೊನಾ ಹೊಡೆತಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ವಾಣಿಜ್ಯೋದ್ಯಮಕ್ಕೆ 4800 ಕೋಟಿ ಲಾಸ್

ಧಾರವಾಡ : ಕೊರೊನಾ ಮಾಹಾಮಾರಿ ವೈರಸ್ ಬಂದಿದೆ ಬಂದಿದ್ದು ಮನುಷ್ಯ ಕುಲವನ್ನೆ ನಡುಗಿಸಿ ಬಿಟ್ಟಿದೆ. ಒಂದರ ನತರ ಮತ್ತೊಂದು ವೈರಸ್ ಅಲೆಗಳು ಬರುತ್ತಿದ್ದು, ಒಂದನೇಯ ಅಲೆಯ ನಂತರ, ಎರಡನೇ ಅಲೆಯ ಅಬ್ಬರ. ಎರಡನೇ ಅಲೆಯ ಅಬ್ಬರ ಕೊಂಚ ಹತ್ತೋಟಿಗೆ ಬರುತ್ತಿದೆ ಎನ್ನುವಷ್ಟರಲ್ಲಿ, ಈಗ ಮೂರನೇ ಅಲೆಯ ಭೀತಿ ಆರಂಭದ ಮುನ್ಸೂಚನೆ. ಈ ಮಾಹಾಮಾರಿ ವೈರಸ್ ಕಟ್ಟಿ ಹಾಕಲು, ಅನಿವಾರ್ಯವಾಗಿ ಸರ್ಕಾರ ಲಾಕ್ ಡೌನ್ ಮಾರ್ಗ ಅನುಸರಿಸಬೇಕಾಗಿದ್ದು, ಇದರ ಬಹುತೇಕ ಎಫೆಕ್ಟ್ ವಾಣಿಜ್ಯೋದ್ಯಮ ಕ್ಷೇತ್ರದ ಮೇಲೆ ಬಿದಿದೆ. ಅದರಲ್ಲೂ ಕಮರ್ಷಿಯಲ್ ಹಬ್ ಎಂದೇ ಕರೆಯಲ್ಪಡುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ, ಲಾಕ್ ಡೌನ್ ಪರಿಣಾಮ ಸಾವಿರಾರು ಕೋಟಿಗಳ ಲಾಸ್ ಸಂಭವಿಸಿದ್ದು, ವರ್ತಕರು ಪರದಾಡುಂತಾಗಿದೆ.
ಸರ್ಕಾರದ ಅನಿವಾರ್ಯ ಲಾಕ್ ಡೌನ್‌ನಿಂದಾಗಿ ವಾಣಿಜ್ಯ ಕ್ಷೇತ್ರವು ಕ್ಷೇತ್ರವನ್ನು ನಡುಗಿಸಿ ಬಿಟ್ಟಿದೆ. ವೈರಸನ್ ಮೊದಲನೆಯ ಅಲೆಗಿಂತ, ಎರಡನೆಯ ಅಲೆಯಿಂದ ವರ್ತಕರು ಕಂಗೆಟ್ಟು ಹೋಗಿದ್ದು, ಕೊರೊನಾ ಮಾಹಾಮಾರಿ ಎರಡನೇ ಅಲೆಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯ ವರ್ತಕರಿಗೆ ಚೇತರಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಲಾಭದಲ್ಲೇ ಇದ್ದ ಉದ್ಯಮಕ್ಕೆ ಕೊರೊನಾ ಕಂಟಕವಾಗಿ ಮಾರ್ಪಟ್ಟಿದ್ದು, ಕೊರೊನಾ ನಂತ್ರ ಲಾಭ ನಷ್ಟದ ಲೆಕ್ಕಾಚಾರ ನೋಡಿದ್ರೆ ನಿಜಕ್ಕೂ ಶಾಕ್ ಆಗುತದೆ.
ಎರಡನೇ ಅಲೆಯ ಅಬ್ಬರದಿಂದಾಗಿ ಕೈಗಾರಿಕೋದ್ಯಮಕ್ಕೆ ಅತಿ ದೊಡ್ಡ ಹೊಡೆತ ಬಿದ್ದಿದ್ದು, ಜೊತೆಗೆ ಹೋಟೆಲ್ ಉದ್ಯಮಕ್ಕೂ ಭಾರಿ ಪೆಟ್ಟು ನೀಡಿದೆ ಮಾಹಾಮಾರಿ ವೈರಸ್. ಹುಬ್ಬಳ್ಳಿ ಧಾರವಾಡ ನಗರದ ಉದ್ಯಮಿಗಳಿಗೆ ಕೋವಿಡ್ ಶಾಕ್ ನೀಡಿದ್ದು, ಈ ವರ್ಷದಲ್ಲಿ ಸುಮಾರು 4800 ನೂರು ಕೋಟಿ ರೂಪಾಯಿ ನಷ್ಟವಾಗಿದೆ. ಎರಡನೇ ಅಲ್ಕೆಯ ಲಾಕ್ ಡೌನ್‌ನ ಎರಡು ತಿಂಗಳಲ್ಲಿ 1 ಸಾವಿರದಿಂದ, 1 ಸಾವಿರಾದ 200 ಕೋಟಿ ರೂಪಾಯಿ ನಷ್ಟವಾಗಿದೆ. ಪ್ರತಿ ವರ್ಷ 25 ಸಾವಿರ ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ, ವಾಣಿಜ್ಯೋದ್ಯಮ ಕೊರೊನಾ ಎಡರನೇ ಅಲೆಯಿಂದಾಗಿ ಕಂಪ್ಲೀಟ್ ನಷ್ಟ ಅನುಭವಿಸುವಂತಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಸುತ್ತಮುತ್ತಲಿನ ಹಲವು ಜಿಲ್ಲೆಯ ಜನರ ವಾಣಿಜ್ಯ ಕೇಂದ್ರ ಆಗಿದ್ದು. ವಾಣಿಜ್ಯ ನಗರಿ ಎಂದೇ ಕ್ಯಾತೆ ಪಡೆದುಕೊಂಡಿದೆ. ಕೊರೋನಾ ತೀವ್ರತೆಗೆ ಹುಬ್ಬಳ್ಳಿಯ ವಾಣಿಜ್ಯ ವಹಿವಾಟು ಸಂಪೂರ್ಣ ತತ್ತರಗೊಂಡಿದ್ದು,. ಲಾಕ್ ಡೌನ್ ಅಂತ್ಯಗೊಂಡಿದ್ರೂ, ಸರ್ಕಾರ ಹಂತ ಹಂತವಾಗಿ ಸಡಿಲಿಕೆ ಘೋಷಣೆ ಮಾಡುತ್ತಿದ್ದು, ಈಗ ಜುಲೈ 5 ರ ನಂತರ ಬಹುತೇಕ ಲಾಕ್ ಡೌನ್ ಸಡಿಲಿಕೆಗೆ ಮುಂದಾಗಿದೆ. 2.0 ಅನ್ ಲಾಕ್ ಪ್ರಕ್ರೆಯೆಯಲ್ಲಿ ಹಲವು ಕ್ಷೇತ್ರಗಳಿಗೆ ಸಡಿಲಿಕೆ ಮಾಡಿದೆ ಆದರೂ ಪೂರ್ಣ ಪ್ರಮಾಣ ಸಡಿಲಿಕೆ ಸಿಗದೇ ವ್ಯಾಪಾರ ವಹಿವಾಟು ತಕ್ಕಮಟ್ಟಿಗೆ ನಡೆಯುತ್ತಿವೆ. ಅಲ್ಲದೆ ಹೋಟೆಲ್ ಉದ್ಯಮಕ್ಕೆ ಸುಮಾರು 500 ಕೋಟಿಯಷ್ಟು ಲಾಸ ಆಗಿದ್ದು, ಇನ್ನೂ ಕೈಗಾರಿಕಾ ಕ್ಷೇತ್ರದಲ್ಲಿ ಸುಮಾರು 600 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಸಿನೆಮಾ, ಟೂರಿಸಂ ಸೇರಿ ಮನರಂಜನೆ ಕ್ಷೇತ್ರದಲ್ಲಿ ನೋಡುವುದಾದರೆ, ಸುಮಾರು 600 ಕೋಟಿ ರೂಪಾಯಿ ನಷ್ಟವಾಗಿದೆ. ಜವಳಿ ವ್ಯಾಪಾರದಲ್ಲಿ 50 ಕೋಟಿಗೂ ಹೆಚ್ಚು ನಷ್ಟವಾಗಿದೆ. ಎಲೆಕ್ಟ್ರಿಕಲ್ ಸಾಮಗ್ರಿಗಳ ಮಾರಾಟಗಾರರಿಗೂ ಲಾಸ ಆಗಿದ್ದು. ಅಂಗಡಿಯಲ್ಲಿ ಮಾರಾಟ ವಸ್ತುಗಳು ಇದ್ದರೂ, ಲಾಕ್ ಡೌನ್‌ನಿಂದಾಗಿ ಖರೀದಿಗೆ ನಿರೀಕ್ಷಿತ ಮಟ್ಟದಲ್ಲಿ ಜನ ಬರುತ್ತಿಲ್ಲ. ಇನ್ನೂ 2.0 ಅನ್ ಲಾಕ್ ನಿಯಮ ಪ್ರಕಾರ ಕೇವಲ ಇಬ್ಬರಿಗೆ ಮಾತ್ರ ಬಿಟ್ಟುಕೊಳ್ಳಲು ಅವಕಾಶ ನೀಡಲಾಗಿದ್ದು, ಇದರ ಜೊತೆಗೆ ವ್ಯಾಪರಕ್ಕೆ ಸಮಯ ನಿಗದಿ ಮಾಡಿರುವುದರಿಂದ, ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಆಗ್ತಿಲ್ಲ, ಈಗ ಅನ್ ಲಾಕ್ 3.0 ಸರ್ಕಾರ ಘೋಷಣೆ ಮಾಡಿದ್ದು ಇದರಿಂದಾಗಿ ಮುಂದಿನ ದಿನಗಳಲ್ಲಿ ಉತ್ತಮ ವ್ಯಾಪಾರ ಆಗಬಹುದೆಂಬ ವರ್ಕತರು ನೀರಿಕ್ಷೆಯಲ್ಲಿದ್ದಾರೆ.
ಎರಡನೆ ಅಲೆಯ ಲಾಕ್ ಡೌನ್ ಬಹುತೇಕ ಎರಡು ತಿಂಗಳು ಮಾಎಲಾಗಿದ್ದು, ಇದರಿಂದಾಗಿ ಅತಿದೊಡ್ಡ ಲಾಸ ಆಗಿದೆ. ಇನ್ನೂ ಇಷ್ಟೊಂದು ಲಾಸ ಆಗಿದ್ದರು ಸರ್ಕಾರ ಮಾತ್ರ ಕೇವಲ ವಿದ್ಯುತ್ ಬಿಲ್ ನಲ್ಲಿ ಮಾತ್ರ ಕೆಲ ರಿಯಾಯಿತಿ ನೀಡಿದ್ದು. ಮೇ ಮತ್ತು ಜೂನ್ ತಿಂಗಳ ಬಿಲ್ ನಲ್ಲಿ ಫಿಕ್ಸ್ ಚಾರ್ಜಸ್ ಗೆ ರಿಯಾಯಿತಿ ಸಿಕ್ಕಿದೆ. ಆದ್ರೆ ಏಪ್ರಿಲ್ ತಿಂಗಳಿನಿಂದಲೇ ಪ್ರತಿ ಯೂನಿಟ್ ಗೆ ವಿದ್ಯುತ್ ದರ ಮಾಡಲಾಗಿದೆ. ಇದರಿಂದಾಗಿ ಸರ್ಕಾರ ನೀಡಿದ ರಿಯಾಯಿತಿ ಯಾವುಕ್ಕೆ ಹತ್ತಬೇಕು, ಎರಡು ತಿಂಗಳ ಲಾಕ್ ಡೌನ್ ನಿಂದ ವರ್ತಕರಿಗೆ ಮತ್ತಷ್ಟು ಹೊಡೆತವಾಗಿದೆ. ಹೀಗಾಗಿ ಸರ್ಕಾರ ವರ್ತಕರಿಗೆ ವಿಶೇಷ ರಿಯಾಯಿತಿ ಘೋಷಿಸಿಲು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಹೇಂದ್ರ ಲಡ್ಡದ್ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
