ಟಿವಿಮನರಂಜನೆಸಿನಿಮಾ

ಪತ್ರವಳ್ಳಿ ಅಂದ್ರೆ ಅದಲ್ಲ ಅರ್ಥ ಎಂದ ಗದರಿದ ಕಿಚ್ಚ!

ಪೂರ್ಣ ವಿ-ರಾಮ

ಮಂಜು ಪಾವಡಗ ದಿವ್ಯ ಸುರೇಶ್ ವಿಷಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಪತ್ರಕರ್ತ ಚಂದ್ರಚೂಡ್ ಚಕ್ರವರ್ತಿ ಪತ್ರವಳ್ಳಿ ಎಂಬ ಪದವನ್ನ ಬಳಸಿದ್ದಕ್ಕೆ ನಿರೂಪಕ ಸುದೀಪ್ ಸಿಟ್ಟಿಗೆದ್ದಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಈವೆಂಟ್ ನಲ್ಲಿ ಈ ಬಗ್ಗೆ ಡೀಟೇಲಾಗಿ ಮಾತನಾಡಿದ ಸುದೀಪ್ ಪತ್ರವಳ್ಳಿ ಎಂಬ ಪದಕ್ಕೆ ನೀವು ಹೇಳಿದ ಅರ್ಥ ಯಾವ ನಿಘಂಟಿನಲ್ಲಿದೆ ಎಂದು ಪ್ರಶ್ನಿಸಿದ್ದಾರೆ!

ಬೇಲಿ ಹಿಂದೆ ನಡೆಯುವ ಕಾಮ= ಪತ್ರವಳ್ಳಿ!

ಚಂದ್ರಚೂಡ್ ಚಕ್ರವರ್ತಿ ಮಾತನಾಡುವ ವೇಗದಲ್ಲಿ ಹೆಣ್ಣು ಮಗಳೊಬ್ಬಳಿಗೆ ಪತ್ರವಳ್ಳಿ ಎಂದು ಕರೆದುಬಿಟ್ಟಿದ್ದಾರೆ. ಹಾಗೆಂದರೆ ಬೇಲಿ ಹಿಂದೆ ನಡೆಯುವ ಕಾಮ ಎಂದು ವಿವರಿಸಿದ್ದಾರೆ. ಅದು ಆಗಿದ್ದು ವಾರದ ಮಧ್ಯೆ ನಡೆಯುವ ಸಂಚಿಕೆಗಳಲ್ಲಿ. ಅವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ವಾರದ ಅಂತ್ಯಕ್ಕೆ ಬಂದು ನಿಲ್ಲುವ ಕಿಚ್ಚ ಸುದೀಪ್ ಈ ವಿಷಯಕ್ಕೆ ಚಂದ್ರಚೂಡ್ ಅವರಿಗೆ ದಬಾಯಿಸುವ ಮೂಲಕ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ವಿಶ್ವದ ಯಾವ ನಿಘಂಟಿನಲ್ಲೂ ಪತ್ರವಳ್ಳಿ ಎಂದರೆ ನಿಮ್ಮ ಮಾತಿನ ಅರ್ಥ ಇಲ್ಲವೇ ಇಲ್ಲ. ಅದು ಹೇಗೆ ಹಾಗೊಂದು ಕಥೆ ಕಟ್ಟಿದಿರಿ? ಮಾತಿನ ಮೇಲೆ ನಿಗಾ ಇರಲಿ ಎಂದು ಹೇಳಿ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ ಕಿಚ್ಚ ಸುದೀಪ.

ಹೆಣ್ಣುಮಕ್ಕಳಿಗೆ ಗೌರವ ಕೊಡಿ!

ನೀವು ಮಾತೆತ್ತಿದರೆ ಐ ರೆಸ್ಪೆಕ್ಟ್ ವುಮೆನ್ ಅಂತೀರಿ. ಅಂಥದ್ದರಲ್ಲಿ ಇನ್ನೊಂದು ಹೆಣ್ಮಗಳನ್ನು ಹಾಗೆ ಕರೆಯುವುದು ಎಷ್ಟು ಸರಿ? ಪತ್ರವಳ್ಳಿ ಎಂಬ ಪದದ ಅರ್ಥ ಹಾಗೆ ಎಂದು ನಿಮ್ಮ ಬಾಯಲ್ಲೇ ಕೇಳಿದ್ದು. ಇಂಥ ತಪ್ಪುಗಳು ಮತ್ತೆ ಆಗಬಾರದು ಎಂದು ಇಂಡೈರೆಕ್ಟ್ ಹಾಗೂ ಡೈರೆಕ್ಟ್ ಆಗಿಯೇ ವಾರ್ನ್ ಮಾಡಿದ್ದಾರೆ ಕಿಚ್ಚ ಸುದೀಪ!

Spread the love

Related Articles

Leave a Reply

Your email address will not be published. Required fields are marked *

Back to top button