ಜಿಲ್ಲಾ ಸುದ್ದಿರಾಮನಗರ

ಮಾಗಡಿಯಲ್ಲಿ ಬಲೆಗೆ ಬಿದ್ದ ನರಹಂತಕ ಚಿರತೆ

ರಾಮನಗರ: ಕಳೆದ 15 ದಿನಗಳ ಹಿಂದೆ ಮಹಿಳೆ ಮೇಲೆರಗಿ ಆಕೆಯನ್ನು ಬಲಿ ಪಡೆದಿದ್ದ ಚಿರತೆ ಸೆರೆಹಿಡಿಯುವಲ್ಲಿ ಮಾಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮಹಾಲಕ್ಷ್ಮಮ್ಮ ಅವರನ್ನು ಚಿರತೆ ಬಲಿ ಪಡೆದಿತ್ತು, ಇದಾದ ನಂತರ ಚಿರತೆ ಸೆರೆ ಹಿಡಿಯು ವಂತೆ ಸಾಕಷ್ಟು ಒತ್ತಡ ಕೇಳಿ ಬಂದಿತ್ತು, ಅರಣ್ಯ ಇಲಾಖೆ ಸತತ ಪ್ರಯತ್ನದಿಂದ 8 ವರ್ಷದ ಹೆಣ್ಣು ಚಿರತೆ ಸೆರೆಹಿಡಿ ಯುವಲ್ಲಿ ಮಾಗಡಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಮಾಗಡಿ ತಾಲೂಕಿನ ಕಲ್ಲುಪಾಳ್ಯ ಗ್ರಾಮದಲ್ಲಿ ನರಹಂತಕ ಚಿರತೆ ಚಲನವಲನಗಳ ಬಗ್ಗೆ ತಿಳಿಯಲು ಅರಣ್ಯ ಇಲಾಖೆಯ 15ಕ್ಕೂ ಹೆಚ್ಚು ಸಿಬ್ಬಂದಿಗಳು, ವನ್ಯ ಜೀವಿ ತಜ್ಞರು, 32 ಕ್ಯಾಮರಗಳು, 6ಕ್ಕೂ ಹೆಚ್ಚು ಬೊನ್‌ಗಳನ್ನು ಇರಿಸಲಾಗಿತ್ತು, ಬೋನಿಗೆ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟಿಸಿರುವ ಬಿಡುವಂತಾಗಿದೆ.

ಈ ಕಾರ್ಯಚರಣೆ ಇನ್ನು ಕೆಲವು ದಿನಗಳ ಕಾಲ ನಡೆಯಲಿದ್ದು ಈ ಭಾಗದಲ್ಲಿ ಇನ್ನಷ್ಟು ಚಿರತೆಗಳು ಇರುವುದರಿಂದ ಕಾರ್ಯಚರಣೆ ಮುಂದುವರಿಸಲಾಗುತ್ತದೆಂದು ಮಾಗಡಿ ವಲಯ ಅರಣ್ಯ ಅಧಿಕಾರಿ ಜಗದೀಶ್ ಗೌಡ ತಿಳಿಸಿದ್ದಾರೆ.

ಈಗ ಸೆರೆಯಾಗಿರುವ ಚಿರ ತೆಯು 8 ವರ್ಷದ ಹೆಣ್ಣು ಚಿರತೆಯಾಗಿದ್ದು ಸಾಕಷ್ಟು ಬಲಿಷ್ಠವಾಗಿದ್ದು ಈ ಚಿರತೆಯೇ ಮಹಾಲಕ್ಷ್ಮಮ್ಮ ಅವರನ್ನು ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಗ್ರಾಮಸ್ಥರು ಸಹಕಾರ ನೀಡಿದರೆ ಈ ಭಾಗದಲ್ಲಿರುವ ಇನ್ನು ಹಲವು ಚಿರತೆಗಳನ್ನು ಸೆರೆ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗುಗುವುದು ಎಂದು ತಿಳಿಸಿದ್ದಾರೆ.

ಚಿರತೆ ಸೆರೆಯಾಗಿರುವ ಸುದ್ದಿ ತಿಳಿಯು ತ್ತಿದ್ದಂತೆ ಚಿರತೆ ನೋಡಲು ಗ್ರಾಮಸ್ಥರು ಮುಗಿ ಬಿದ್ದಿದ್ದು ಕಂಡು ಬಂದಿತು.

Related Articles

Leave a Reply

Your email address will not be published. Required fields are marked *

Back to top button