ಜಿಲ್ಲಾ ಸುದ್ದಿಮನರಂಜನೆರಾಮನಗರಸಿನಿಮಾಸೆಲೆಬ್ರಿಟಿ

ಚನ್ನಪಟ್ಟಣದ ಗೌಡಗೆರೆಗೆ ಶುಕ್ರವಾರ ಕಿಚ್ಚ ಸುದೀಪ್ ದಂಪತಿ ಆಗಮನ

ರಾಮನಗರ: ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರಕ್ಕೆ ಸೆ.3 ರ ಶುಕ್ರವಾರ ಖ್ಯಾತ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭೇಟಿ ನೀಡಲಿದ್ದಾರೆ.

ತಮ್ಮ ಹುಟ್ಟುಹಬ್ಬದ ಅಂಗವಾಗಿ ಕುಟುಂಬ ಸಮೇತರಾಗಿ ಆಗಮಿಸಲಿರುವ ಅವರು, ಕ್ಷೇತ್ರದಲ್ಲಿ ಇತ್ತೀಚಿಗೆ ಅನಾವರಣಗೊಂಡಿರುವ ವಿಶ್ವದ ಅತಿಎತ್ತರದ ಶ್ರೀ ಚಾಮುಂಡೇಶ್ವರಿ ಪಂಚಲೋಹವನ್ನು ವೀಕ್ಷಣೆ ಮಾಡಿ, ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ.

ಕ್ಷೇತ್ರದಲ್ಲಿ ಇತ್ತೀಚೆಗೆ ವಿಶ್ವದ ಅತಿಎತ್ತರದ ಚಾಮುಂಡೇಶ್ವರಿ ತಾಯಿಯ ಪಂಚಲೋಹ ವಿಗ್ರಹ ಅನಾವರಣಗೊಂಡಿತ್ತು. ಈ ವಿಚಾರವನ್ನು ತಿಳಿದುಕೊಂಡಿರುವ ಸುದೀಪ್ ರವರು ಕುಟುಂಬ ಸಮೇತರಾಗಿ ಆಗಮಿಸಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಚಾಮುಂಡಿ ಆರಾಧಕ ಸುದೀಪ್ :

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಾಗಿರುವ ಸುದೀಪ್ ಕನ್ನಡ ಚಿತ್ರರಂಗ ಅಲ್ಲದೇ, ಬಹುಭಾಷಾ ನಟರಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಅಪಾರ ದೈವಭಕ್ತರಾಗಿರುವ ಅವರು, ತಾಯಿ ಚಾಮುಂಡೇಶ್ವರಿಯ ಆರಾಧಕರಾಗಿದ್ದು, ಪ್ರತಿವರ್ಷ ತಮ್ಮ ಹುಟ್ಟುಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ. ಇದರ ಮಧ್ಯೆ ತಾಲೂಕಿನ ಗೌಡಗೆರೆ ಕ್ಷೇತ್ರದಲ್ಲಿ ತಾಯಿಯ ಅತಿಎತ್ತರದ ಆಕರ್ಷಕ ವಿಗ್ರಹ ತಲೆ ಎತ್ತಿರುವ ವಿಚಾರ ತಿಳಿದು, ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಈ ಭೇಟಿಗೆ ಯುವ ಮುಖಂಡ ಚಂದು ಕರಿಯಪ್ಪ ರಾಯಭಾರ ವಹಿಸಿದ್ದಾರೆ.

ಕ್ಷೇತ್ರಕ್ಕೆ ಕಿಚ್ಚ ಸುದೀಪ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಅಂದಿನ ಕಾರ್ಯಕ್ರಮಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button