ಜಿಲ್ಲಾ ಸುದ್ದಿಮೈಸೂರು

ಏಕಾಏಕಿ ಮನೆಗೆ ನುಗ್ಗಿದ ಚಿರತೆ: ಬೆಚ್ಚಿ ಬಿದ್ದ ಮನೆ ಕುಟುಂಬಸ್ಥರು

ಮೈಸೂರು: ಕಾಡಂಚಿನ ಗ್ರಾಮಗಳಲ್ಲಿನ ಜನರಿಗೆ ಕಾಡುಪ್ರಾಣಿಗಳ ಕಾಟ ತಪ್ಪಿದ್ದಲ್ಲ. ನಿತ್ಯವೂ ಕಾಡು ಪ್ರಾಣಿಗಳ ಭಯದಲ್ಲೇ ಜೀವನ ನಡೆಸುವ ಪರಿಸ್ಥಿತಿ ಇದೆ. ಅಂತೆಯೇ ನಿನ್ನೆ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ ಚಿರತೆಯೊಂದು ಮನೆಯೊಳಗೆ ನುಗ್ಗಿದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ.

ನಂಜನಗೂಡು ತಾಲೂಕಿನ ಯಡಹಳ್ಳ ಗ್ರಾಮದ ಮನೆಗೆ ಶನಿವಾರ ರಾತ್ರಿ ಚಿರತೆಯೊಂದು ನುಗ್ಗಿದ್ದ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ನಗು ಜಲಾಶಯದ ಹಿನ್ನೀರು ಪ್ರದೇಶದ ಕಾಡಂಚಿನಲ್ಲಿರುವ ಯಡಹಳ್ಳಿ ಗ್ರಾಮದ ರೈತ ಚೆನ್ನಪ್ಪ ಅವರ ಮನೆಗೆ ಚಿರತೆ ನುಗ್ಗಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದೆ. ಚಿರತೆ ಮನೆಯೊಳಗೆ ಬಂದ ತಕ್ಷಣ ಕುಟುಂಬಸ್ಥರೆಲ್ಲರೂ ಹೊರ ಓಡಿ ಹೋಗಿ ಹೊರಗಿನಿಂದ ಬಾಗಿಲು ಹಾಕಿದ್ದಾರೆ.

ತಕ್ಷಣವೇ ಕುಟುಂಬ ಸದಸ್ಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿರತೆಗೆ ಬಲೆ ಬೀಸಿದು ಕುಟುಂಬ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button