ಕಲಬುರ್ಗಿ

ಹಿಂದೂ ಮುಸ್ಲಿಂ ಭಾವೈಕ್ಯತೆ ತಾಣ ಲಾಡ್ಲಾಪೂರ ಹಾಜಿಸರ್ವರ್ ದೇವರ ಹುಂಡಿಗೆ ಕನ್ನ

ಕಲಬುರ್ಗಿ: ಚಿತ್ತಾಪುರ ತಾಲೂಕು ಲಾಡ್ಲಾಪುರ ಗ್ರಾಮದ ಪ್ರಸಿದ್ಧ ಹಿಂದೂ ಮುಸ್ಲಿಂ ಭಾವೈಕ್ಯತೆ ತಾಣವಾದ ಹಾಜಿಸರ್ವರ್ ದೇವರ ಹುಂಡಿಗೆ ಖದೀಮರು ಕನ್ನ ಹಾಕಿದ್ದಾರೆ.

ದೇವಸ್ಥಾನ ಆವರಣದಲ್ಲಿರುವ ಹುಂಡಿ ಒಡೆದು ಒಳಗಿನ ಹಣ ಲಪಟಾಯಿಸಿದ್ದಾರೆ‌. ಕಳೆದ ಒಂದು ವರ್ಷದಿಂದ ಹುಂಡಿಯಲ್ಲಿ ಜಮಾ ಆಗಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ಹಣ ರಾತ್ರೋರಾತ್ರಿ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ‌.

ಕೆಲ ಚಿಲ್ಲರೆ ನಾಣ್ಯಗಳು ಹಾಗೆ ಬಿಟ್ಟಿದ್ದು, ದೇವಸ್ಥಾನದ ಹೊರವಲಯದಲ್ಲಿಯೂ ಚಿಲ್ಲರೆ ಹಣ ಬಿಸಾಡಿ ಹೋಗಿದ್ದಾರೆ. ಸ್ಥಳಕ್ಕೆ ವಾಡಿ ಪಿಎಸ್ಐ ವಿಜಯಕುಮಾರ ಭೇಟಿನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಖದೀಮ ಕಳ್ಳರ ಬಂಧನಕ್ಕೆ ಜಾಲ ಬಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button