ನಾಲ್ಕು ದಿನದಲ್ಲಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಪೊಲೀಸ್ ಪೇದೆ ಅನುಮಾನಾಸ್ಪದ ಸಾವು

ಕಲಬುರಗಿ: ಮದುವೆಗೆ ಇನ್ನೂ ನಾಲ್ಕು ದಿನ ಉಳಿದಿರುವಾಗಲೇ ಪೊಲೀಸ್ ಕಾನ್ಸಟೇಬಲ್ ಓರ್ವ ರೈಲು ಹಳಿಗೆ ತೆಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥೀತಿಯಲ್ಲಿ ಮೃತದೇಹ ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ತಾಲೂಕಿನ ಸಾವಳಗಿ ಬಳಿ ನಡೆದಿದೆ.
ಶ್ರೀನಾಥ್ (25) ಶವವಾಗಿ ಪತ್ತೆಯಾದ ಕಾನಸ್ಟೇಬಲ್. ಇದೆ ಡಿಸೆಂಬರ್ 1ರಂದು ಕಾನ್ಸ್ಟೇಬಲ್ ವಿವಾಹ ನಿಶ್ಚಯವಾಗಿತ್ತು. ಮದುವೆಗೆ ನಾಲ್ಕು ದಿನ ಬಾಕಿ ಇರುವಾಗಲೇ ಶ್ರೀನಾಥ ಶವವಾಗಿ ಪತ್ತೆಯಾದ್ದಾರೆ. ಅಫಜಲಪುರ ತಾಲೂಕಿನ ಮದರಾ ಕೆ ಗ್ರಾಮದ ನಿವಾಸಿಯಾಗಿದ್ದ ಶ್ರೀನಾಥ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇಂದು ಬೆಳ್ಳಗೆ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಅಥವಾ ಕೊಲೆ ಎಂಬ ನಿಖರ ಮಾಹಿತಿ ತಿಳಿದು ಬಂದಿಲ್ಲ. ನಾಲ್ಕು ದಿನಗಳಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಡಬೇಕಿದ್ದ ಯುವಕ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತನಿಖೆ ಆರಂಭಗೊಂಡಿದ್ದು, ತನಿಖೆ ನಂತರವಷ್ಟೆ ಕೊಲೆ ಅಥವಾ ಆತ್ಮಹತ್ಯೆ ಅನ್ಮೋದು ತಿಳಿದುಬರಬೇಕಿದೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




