ಕಲಬುರ್ಗಿ

ಪಾಲಿಕೆ ಆಯುಕ್ತರ ವಿರುದ್ಧ ಆರೋಪ ಪ್ರಕರಣ: ಯುವತಿಯಿಂದ ಕಲಬುರ್ಗಿ ಪೊಲೀಸ್ ಕಮಿಷನರ್ ಭೇಟಿ

ಕಲಬುರಗಿ: ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ವಿರುದ್ಧ ಯುವತಿ ಆರೋಪ ಪ್ರಕರಣಕ್ಕೆ ಸಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಎನ್. ರವಿಕುಮಾರ ಪ್ರತಿಕ್ರಿಯೆ ನೀಡಿದ್ದು, ದೆಹಲಿ ಮೂಲದ ಯುವತಿ ತಮ್ಮನ್ನು ಭೇಟಿಯಾಗಿದ್ದಳು. ಆದ್ರೆ ದೂರು ದಾಖಲಿಸಿಲ್ಲ ಅಂತ ಹೇಳಿದ್ದಾರೆ.

ದೆಹಲಿ ಮೂಲದ ಯುವತಿ ತಮ್ಮ ಪೊಷಕರ ಜೊತೆ ಮೂರು ದಿನಗಳ ಹಿಂದೆ ಕಲಬುರಗಿಗೆ ಬಂದು ನನಗೆ ಭೇಟಿ ಮಾಡಿದ್ದಳು. ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ನನಗೆ ಮದುವೆಯಾಗುವುದಾಗಿ ಮೋಸ ಮಾಡಿದ್ದಾರೆ ಎಂದು ಮೌಖಿಕವಾಗಿ ಹೇಳಿದ್ದರು. ನಮ್ಮಲ್ಲಿ ಆ ಯುವತಿಯಾಗಲಿ, ಕುಟುಂಬದವರಾಗಲಿ ಯಾವುದೇ ದೂರು ನೀಡಿಲ್ಲ.ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರೇ ನಮ್ಮ ಸೈಬರ್ ಸೆಲ್ ಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ನನ್ನ ವಿರುದ್ದ ಸುಳ್ಳು ಆರೋಪ ಮಾಡಲಾಗುತ್ತಿದೆ ಅಂತ ಲೋಖಂಡೆ ದೂರು ನೀಡಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸಿ ತನಿಖೆ ನಂತ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button