ಕಲಬುರ್ಗಿ
ಕಲಬುರ್ಗಿ: ಮರಿ ಮೊಸಳೆ ಹಿಡಿದ ಅರಣ್ಯಾಧಿಕಾರಿಗಳು

ಕಲಬುರಗಿ: ಹೊಂಡದಲ್ಲಿ ಕಾಣಿಸಿಕೊಂಡು ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದ ಎರಡು ಮೊಸಳೆಗಳಲ್ಲಿ ಮರಿ ಮೊಸಳೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ರಾಜಾಪುರ ಪ್ರದೇಶದ ಹೊಂಡದಲ್ಲಿ ಎರಡು ಮೊಸಳೆಗಳು ಕಾಣಿಸಿಕೊಂಡಿದ್ದವು. ಮೊಸಳೆ ಪ್ರತ್ಯಕ್ಷ್ಯದಿಂದ ಸುತ್ತಲಿನ ರೈತರು, ನಿವಾಸಿಗಳು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಇಂದು ಬೆಳಿಗ್ಗೆಯಿಂದ ಬಲೆ ಬಳಸಿ ಮೊಸಳೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಡೆಗೂ ಸಾಯಂಕಾಲದ ಹೊತ್ತಿಗೆ ಮರಿ ಮೊಸಳೆ ಬಲೆಗೆ ಬಿದ್ದಿದೆ. ದೊಡ್ಡ ಮೊಸಳೆಗಾಗಿ ಶೋಧಕಾರ್ಯ ಮುಂದುವರೆದಿದೆ.





