ಹುಬ್ಬಳ್ಳಿ - ಧಾರವಾಡ

ಅವಳಿನಗರದಲ್ಲಿ ಹೆಚ್ಚುತ್ತಿದೆ ಗನ್ ಸೌಂಡ್; ದುರ್ಬಳಕೆ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಕಮೀಷನರ್

ಹುಬ್ಬಳ್ಳಿ: ಅದು ರಾಜ್ಯದಲ್ಲೆ ಅತೀ ವೆಗವಾಗಿ ಬೆಳೆಯುತ್ತಿರುವ ನಗರ. ಅಷ್ಟೆ ಏಕೆ ಅದನ್ನು ಛೋಟಾ ಮುಂಬಯಿ, ವಾಣಿಜ್ಯ ನಗರಿ ಅಂತಲೂ ಕರೆಯುತ್ತಾರೆ. ಕಳೆದ ಹಲವಾರು ದಿನಗಳಿಂದ ನಗರದಲ್ಲಿ ಕ್ರೈಂ ರೇಟ್ ಹೆಚ್ಚುತ್ತಲೇ ಇದೆ. ಅಲ್ಲದೇ ಬೇಕಾಬಿಟ್ಟಿಯಾಗಿ ನೀಡಿರುವ ಗನ್ ಲೈಸನ್ಸ್ ಸದ್ಯ ಸಾರ್ವಜನಿಕರ ನಿದ್ದೆಗೆಡಿಸಿದೆ. ಬರ್ತಡೇ ಪಾರ್ಟಿ, ಮದುವೆಗಳಲ್ಲೂ ಶೋಕಿಗಾಗಿ ಗುಂಡು ಹಾರಿಸಲಾಗುತ್ತಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ದಿನಕಳೆದಂತೆ ರಾಜ್ಯದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳು. ಆದರೆ ಸದ್ಯ ಲಾಕ್ ಡೌನ್ ಹಾಗೂ ಕೊರೋನಾದಿಂದ ಅವಳಿನಗರಗಳಲ್ಲಿ ಕಡಿಮೆಯಾಗಿದತ್ತು, ಅನ್ ಲಾಕ್ ಪ್ರಕ್ರೆಯೆಯಿಂದ ಈಗ ಮತ್ತೆ ಕ್ರೈಂ ರೇಟ್ ಈಗ ಹೆಚ್ಚುತ್ತಿದೆ. ಅಲ್ಲದೇ ಕಳೆದ ಎರಡು ಮೂರು ತಿಂಗಳಿಂದ ಧಾರವಾಡ ಜಿಲ್ಲೆ ಹಾಗೂ ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ಗನ್ ಬಳಕೆ ಹಾಗೂ ಗುನ್‌ನಗಳ ಸದ್ದು ಕೇಳಿ ಬರುತ್ತಿರುವುದು ಇಲ್ಲಿನ ಜನರಲ್ಲಿ ಆತಂಕಕ್ಕೆ ತಂದೊಡ್ಡಿದೆ. ಲಾಕ್ ಡೌನ್ ಗಿಂತ ಮೊದಲೂ ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಹಾಗೂ ವಿದ್ಯಾಗಿರಿ ಠಾಣೆಯ ಸರಹದ್ದಿನಲ್ಲಿ ಬರ್ತಡೇಗಾಗಿ ಗಾಳಿಯಲ್ಲಿ ಗುಂಡುಹಾರಿಸಿ ಸಂಭ್ರಮಿಸಿಲಾಗಿತ್ತು. ಇವರೆಡೂ ಪ್ರಕರಣ ಮಾಸುವ ಮುನ್ನವೇ ವಾಣಿಜ್ಯ ನಗರಿಯಲ್ಲೂ ಅಂತಹುದೇ ಘಟನೆ ಮರುಕಳಿಸಿದೆ. ಹೀಗಾಗೇ ಸದ್ಯ ಸ್ವತಃ ಖಾಕಿ ಟೀಂ ಗಾಬರಿಯಾಗಿದೆ. ಎಲ್ಲೆಂದರಲ್ಲಿ ಗನ್ ಗಳ ಬಳಕೆ ಹಾಗೂ ಗುಂಡು ಹಾರಿಸುವುದರಿಂದ ಯಾರಿಗಾದರೂ ಹೆಚ್ಚುಕಮ್ಮಿ ಆದರೆ ಏನು ಗತಿ
ಎನ್ನೋ ಆತಂಕ ಮನೆ‌ಮಾಡಿದ್ದು. ಈಗ ಎಚ್ಚೆತ್ತತ್ತುಕೊಂಡಿರುವ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ ಆಯುಕ್ತರು ಗನ್ ಲೈಸೆನ್ಸ್‌ಗಳ ಕುರಿತು ಪರಿಶೀಲನೆ ಮುಂದಾಗುತ್ತಿದ್ದಾರೆ.‌

ಅವಳಿ ನಗರದ ಕಮೀಷನರೇಟ್ ಘಟಕದಿಂದ ಬೇಕಾಬಿಟ್ಟಿ ಗನ್ ಲೈಸನ್ಸ್ ನೀಡಿರುವುದೆ ಇಷ್ಟಕ್ಕೆಲ್ಲಾ ಕಾರಣ ಎಂದು ಹೇಳಲಾಗುತ್ತಿದೆ. ಗನ್ ಲೈಸನ್ಸ್ ತೆಗೆದುಕೊಳ್ಳಬೇಕಾದರೇ ಇಲಾಖೆಯ ಟ್ರೈನಿಂಗ್ ಮುಗಿಸಬೇಕು. ಅಲ್ಲದೆ ಗನ್ ಲೈಸನ್ಸ್ ಅವಶ್ಯಕತೆ ಬಗ್ಗೆ ಮನವರಿಕೆ ಮಾಡೋದು ಸೇರಿದಂತೆ ಅನೇಕ ನಿಯಮಗಳು ಇರುತ್ತವೆ. ಆದರೆ ಕಳೆದ 2018-19 ರಲ್ಲಿ ಮದ್ಯವರ್ತಿಗಳ ಮೂಲಕ ಗನ್ ಲೈಸನ್ಸ್ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿವೆ. ಆದರೆ ಕಮೀಷನರ್ ಸದ್ಯ ಲೈಸನ್ಸ್ ರಿನಿವಲ್ ಟೈಂನಲ್ಲಿ ಅವೆಲ್ಲವನ್ನೂ ಕಡಿವಾಣ ಹಾಕುತ್ತವೆ ಎನ್ನುತ್ತಾರೆ.

ಗನ್‌ ದುರ್ಬಳಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಅಕ್ರಮ ಗನ್ ಲೈಸನ್ಸ್ ಗಳನ್ನು ಕ್ಯಾನ್ಸಲ್ ಮಾಡೋದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯಕ್ಕೆ ಬರುತ್ತದೆ ಎನ್ನುವುದನ್ನು ನೋಡಬೇಕಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button