ಜಿಲ್ಲಾ ಸುದ್ದಿಮನರಂಜನೆರಾಮನಗರಸಿನಿಮಾ

ಜೇಮ್ಸ್ ಟೀಸರ್ ಬಿಡುಗಡೆ ಹಿನ್ನೆಲೆ ಅಭಿಮಾನಿಗಳ ಬೈಕ್ ಜಾಥಾ

ರಾಮನಗರ: ಅಪ್ಪು‌ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಟೀಸರ್ ಇಂದು ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಪುನೀತ್ ಅಭಿಮಾನಿಗಳು ಬೈಕ್ ಜಾಥಾ ನಡೆಸಿದರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆ ಚಿತ್ರವಾದ ಜೇಮ್ಸ್‌ ಚಿತ್ರ ಯಶಸ್ವಿಯಾಗಲಿ ಎಂದು ಚನ್ನಪಟ್ಟಣದಿಂದ ಬೆಂಗಳೂರಿನ ಅಪ್ಪು ಸಮಾಧಿ ಸ್ಥಳಕ್ಕೆ ಘೋಷಣೆ ಕೂಗುತ್ತಾ ಬೈಕ್ ಜಾಥಾ ಮೂಲಕ ತೆರಳಿದರು.

ಚನ್ನಪಟ್ಟಣ ತಾಲೂಕಿನ ತಗಚಗೆರೆ ನಾಗೇಶ್ ಮುಂದಾಳತ್ವದಲ್ಲಿ 50ಕ್ಕೂ ಹೆಚ್ಚು ಮಂದಿ ಕನ್ನಡದ ಬಾವುಟ ಹಿಡಿದು ಜೇಮ್ಸ್ ಗೆ ಶುಭ ಕೋರಲು ಪ್ರಯಾಣ ಬೆಳಸಿದರು. ಅಲ್ಲಲ್ಲಿ ಅಪ್ಪು ಅಭಿಮಾನಿಗಳು ಜಾಥಾಕ್ಕೆ ಶುಭಕೋರಿದರು.

Spread the love

Related Articles

Leave a Reply

Your email address will not be published. Required fields are marked *

Back to top button