ಕಾಲೇಜು ಪ್ರಾರಂಭದ ನಿರ್ಧಾರವನ್ನು ಸರ್ಕಾರ ನಿರ್ಧರಿಸಲಿದೆ : ಸಚಿವ ಅಶ್ವತ್ಥನಾರಾಯಣ

ರಾಮನಗರ: ಸಮಯ ನೋಡಿ ಹತ್ತನೆ ತರಗತಿವರೆಗೆ ಪ್ರಾರಂಭ ಮಾಡಲಿದ್ದು, ನಂತರ ಕಾಲೇಜು ಪ್ರಾರಂಭದ ನಿರ್ಧಾರವನ್ನು ಸರ್ಕಾರ ನಿರ್ಧರಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ಥಳೀಯ ಪರಿಸ್ಥಿತಿ ನೋಡಿ, ಜಿಲ್ಲಾಧಿಕಾರಿಗಳು, ಎಸ್ಪಿಗಳ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಮಾಡಲಿದ್ದೇವೆ. ಹಿಜಾಬ್ ಗಲಾಟೆಯ ವಿಡಿಯೋ ವೈರಲ್ ಆಗಿದೆ. ಇದು ಡಿಜಿಟಲ್ ಯುಗ, ಕಲಿಕೆಗೂ ಬೇಕಾಗುತ್ತೆ.ಇದರಿಂದ ಸಕಾರಾತ್ಮಕವೂ ಇದೇ, ನಕಾರಾತ್ಮಕವೂ ಇದೇ. ಆದರೇ, ಕೆಲವು ಚಟುವಟಿಕೆಗಳಿಗೆ ನಿರ್ಬಂಧ ತರಲಾಗುವುದು ಎಂದು ತಿಳಿಸಿದರು.
ಮಾಜಿ ಸಿಎಂ ಎಚ್ಡಿಕೆಗೆ ಟಾಂಗ್ :
ಕುಮಾರಸ್ವಾಮಿ, ಬಿಜೆಪಿಯ ಯಾರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರಾ? ಎಂದಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ನಮ್ಮ ಪಕ್ಷದ ಹಲವು ನಾಯಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಇವತ್ತು ಇದರ ಬಗ್ಗೆ ಹೇಳಿಕೆ ನೀಡಿದ್ದಾರೆ ಅವರ ಮನೆ ಮಕ್ಕಳು ಓದುತ್ತಿದ್ದಾರಾ ಎಂದು ತಿರುಗೇಟು ಕೊಟ್ಟರು.
ಶಾಲಾ ಕಾಲೇಜುಗಳಲ್ಲಿ ಶಾಂತಿ ಕಾಪಾಡಲು ಸ್ಪಷ್ಟ ನಿಲುವು ತೆಗೆದುಕೊಂಡಿದ್ದೇವೆ. 1995 ರಲ್ಲಿ ಕಾನೂನು ತಂದಿರುವವರು ಯಾರು? ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದೇ, ಇಲ್ಲಿ ಏನು ನಿಲುವು ತೆಗೆದುಕೊಂಡಿದ್ದಾರೆ. ಯಾವ ಶಾಲೆಯಾದರೂ ಸಹ ಧಾರ್ಮಿಕ ಸಮವಸ್ತ್ರಕ್ಕೆ ಅವಕಾಶ ಇಲ್ಲ ಎಂದರು.
ಸರ್ಕಾರಿ ಆಗಲಿ, ಖಾಸಗಿ ಆಗಲಿ ಅವಕಾಶ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರಾಗಲಿ ಎಲ್ಲರಿಗೂ ಈ ಕಾನೂನು ಅನ್ವಯವಾಗಲಿದೆ. ಎಲ್ಲ ರರಲ್ಲಿ ರಾಜಕೀಯ ಮಾಡೋದನ್ನ ಬಿಟ್ಟು ಸ್ಪಷ್ಟ ನಿಲುವು ತೆಗೆದುಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕುಟುಕಿದ ಅವರು, ಇವತ್ತು ನ್ಯಾಯಾಲಯ ಸಹ ಸ್ಪಷ್ಟ ನಿಲುವು ಕೊಟ್ಟಿದೆ. ಮಕ್ಕಳಲ್ಲಿ ಕುತೂಹಲ ಇರುತ್ತದೆ, ಯಾರೋ ಒಬ್ಬರೂ ಮಾಡ್ತಾರೆ ಅಂತಾ ಬೇರೆಯವರು ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಸುಮ್ಮನೆ ಗಾಳಿಯಲ್ಲಿ ಗುಂಡು ಎಂಬುದು ಬೇಡ. ರಾಜಕೀಯವಾಗಿ ಮಾತನಾಡೋದು ಕೂಡ ಬೇಡ. ಸಾಕ್ಷಿ ಇದ್ದರೆ ಅದನ್ನ ಸಾಬೀತು ಮಾಡಲಿ. ಒಬ್ಬ ಯುವತಿಗೆ ಕೆಲ ಸಂಘಟನೆ 5 ಲಕ್ಷ ಬಹುಮಾನ ವಿಚಾರದಲ್ಲಿ ಆ ಸಂದರ್ಭದಲ್ಲಿ ಯುವತಿ ಮಾತನಾಡಿದ್ದಾಳೆ. ಆದರೆ, ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುವುದು ಬೇಡ. ಇಂತಹ ವಿಚಾರಕ್ಕೆ ಪ್ರಚೋದನೆ ಬೇಡವೆಂದು ಮನವಿ ಮಾಡಿದರು.
