ಜಿಲ್ಲಾ ಸುದ್ದಿದಾವಣಗೆರೆ
ನಡುಗಡ್ಡೆಯಲ್ಲಿ ಸಿಲುಕಿ ವೃದ್ಧನ ಪರದಾಟ : ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ

ಬಾಗಲಕೋಟೆ: ಸ್ನಾನ ಮಾಡಲು ಹೋಗಿ ಮಲಪ್ರಭಾ ನದಿಯಲ್ಲಿ ತೇಲಿ ಹೋದ ವ್ಯಕ್ತಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋವನಕೊಪ್ಪ ಬಳಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ.ನದಿಯಲ್ಲಿ ಮುಳ್ಳಿನ ಕಂಟಿ ಆಸರೆ ಮೂಲಕ ಬದುಕುಳಿದ ವ್ಯಕ್ತಿಯನ್ನು ಬೋಟ್ ಮೂಲಕ ತೆರಳಿ ರಕ್ಷಿಸಿದ್ದು, ಗದಗ ಜಿಲ್ಲೆಯ ಕೊಣ್ಣೂರು ಗ್ರಾಮದ ಬಸವರಾಜ ತಳವಾರ(58) ಎಂಬಾತನನ್ನು ರಕ್ಷಿಸಲಾಗಿದೆ.
ಸ್ಥಳಕ್ಕೆ ಬಾದಾಮಿ ಅಗ್ನಿಶಾಮಕ ದಳ ಸಿಬ್ಬಂದಿ, ಕಂದಾಯ ಇಲಾಖೆ, ಪೊಲೀಸರು ಭೇಟಿ ನೀಡಿ ಬೋಟ್ ಮೂಲಕ ವ್ಯಕ್ತಿಯನ್ನು ರಕ್ಷಿಸಿದ್ದಾರೆ.




