ಮನರಂಜನೆಸಿನಿಮಾಸೆಲೆಬ್ರಿಟಿ
Priyanka Chopra: ಅಮೇರಿಕಾದ ನಿರ್ಮಾಪಕರ ಸಂಘದ ಸದಸ್ಯರಾದ ನಟಿ ಪ್ರಿಯಾಂಕಾ ಚೋಪ್ರಾ

ಅಮೇರಿಕಾದ ನಿರ್ಮಾಪಕರ ಸಂಘವು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಸೆಪ್ಟೆಂಬರ್ 14 ರಂದು ತಮ್ಮ ಸಂಘದ ಸದಸ್ಯರನ್ನಾಗಿ ಘೋಷಿಸಿತು.
ಈ ಸಂಘ ಚಲನಚಿತ್ರ, ದೂರದರ್ಶನ ಮತ್ತು ಹೊಸ ಮಾಧ್ಯಮ ನಿರ್ಮಾಪಕರನ್ನು ಒಳಗೊಂಡ ಲಾಭರಹಿತ ವ್ಯಾಪಾರ ಸಂಸ್ಥೆಯಾಗಿದೆ. ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಅಮೇರಿಕಾ 8 ಸಾವಿರಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿದೆ. ಇದರಲ್ಲಿ ಸ್ಕ್ರಿಪ್ಟ್, ಅನಿಮೇಷನ್, ಸಾಕ್ಷ್ಯಚಿತ್ರ ಮತ್ತು ಹೊಸ ಮಾಧ್ಯಮ ಕ್ಷೇತ್ರಗಳಿಂದ ತಂಡ ಗಳನ್ನು ರಚಿಸಲಾಗುತ್ತದೆ.
ತನ್ನ ಹೆಸರಿನಲ್ಲಿ ಹನ್ನೆರಡಕ್ಕೂ ಹೆಚ್ಚು ಉತ್ಪಾದನಾ ಕ್ರೆಡಿಟ್ ಗಳನ್ನು ಹೊಂದಿರುವ ಪ್ರಿಯಾಂಕಾ, ತನ್ನನ್ನು ಸದಸ್ಯೆಯಾಗಿ ಸ್ವಾಗತಿಸಿದ್ದಕ್ಕಾಗಿ ಅಮೇರಿಕಾದ ನಿರ್ಮಾಪಕರ ಸಂಘಕ್ಕೆ ಟ್ವೀಟರ್ ನಲ್ಲಿ ತನ್ನ ಕೃತಜ್ಞತೆ ಅರ್ಪಿಸಿದ್ದಾರೆ. ನಟಿ ಪ್ರಿಯಾಂಕಾ ಪ್ರಸ್ತುತ ತನ್ನ ಚಿತ್ರವಾದ ದಿ ಮ್ಯಾಟ್ರಿಕ್ಸ್ ನ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.




