ಡಿ.17ರಂದು ವಾಯುವ್ಯ ಸಾರಿಗೆ ನೌಕರರಿಂದ ಸುವರ್ಣಸೌಧ ಎದುರು ಉಪವಾಸ ಸತ್ಯಾಗ್ರಹ: ಪಿ ಹೆಚ್ ನೀರಲಕೇರಿ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ದಿನ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು, ಇದೇ ಡಿ.17ರಂದು ವಾಯುವ್ಯ ಸಾರಿಗೆ ಸಿಬ್ಬಂದಿಗಳೆಲ್ಲರು ಸೇರಿಕೊಂಡು ಸುವರ್ಣ ಸೌಧ ಎದುರು ಉಪವಾಸ ಸತ್ಯಾಗ್ರಹ ಧರಣಿ ನಡೆಸಲಾಗುವುದು ಎಂದು ವಾಯುವ್ಯ ಸಾರಿಗೆ ಹೋರಾಟ ಸಮಿತಿ ಗೌರವಾಧ್ಯಕ್ಷ್ಯ ಪಿ ಹೆಚ್ ನೀರಲಕೇರಿ ಹೇಳಿದರು.
ನಗರದ ಸುದ್ದಿಗೋಷ್ಟಡಿ ನಡೆಸಿ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ಅನಾವಶ್ಯಕವಾಗಿ ಕಿರುಕುಳ ನೀಡಲಾಗುತ್ತಿದೆ. ಇದರಿಂದ ಕೆಲಸ ಮಾಡದಂತ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ನಡೆದಂತಹ ಮುಷ್ಕರದಲ್ಲಿ ಪಾಲ್ಗೊಂಡ ಹಲವು ಸಾರಿಗೆ ನೌಕರರಿಗೆ ಕಿರುಕುಳ ನೀಡಲಾಗಿತ್ತಿದೆ ಎನಮದು ಆರೋಪಿಸಿದರು.
ಈ ಹಿಂದೆ ನಡೆದ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಿಬ್ಬಂದಿಯನ್ನು ಮರು ನೇಮಕ ಮಾಡಲಾಗಿದೆ. ಆದರೆ ಈಗ ಮರು ನೇಮಕ ಮಾಡಿದ10 ಸಾವಿರ ನೌಕರರಿಗೆ ದಂಡ ಹಾಕಿದ್ದಾರೆ. ಪ್ರತಿಯೊಬ್ಬರಿಗೆ 10 ಸಾವಿರದಷ್ಟು ದಂಡ ಹಾಕಿದ್ದು, ಇದರಿಂದಾಗಿ ಸಾರಿಗೆ ನೌಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವಾಗ, ಈ ರೀತಿ ದಂಡ ಹಾಕುವುದು ಯಾವ ನ್ಯಾಯವೆಂದು ಪ್ರಶ್ನೆ ಮಾಡಿದರು.
ಮುಷ್ಕರ ಹೆಸರಿನಲ್ಲಿ ಹಾಕಿದ ದಂಡವನ್ನು ಅದೇ ಸಾರಿಗೆ ನೌಕರರಿಗೆ ಮರುಪಾವತಿ ಮಾಡಬೇಕು. 7 ನೇ ವೇತನ ಆಯೋಗವನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಡಿ. 17 ರಂದು ಸುವರ್ಣಸೌಧ ಎದುರು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವದು ಎಂದು ತಿಳಿಸಿದರು.




