ಜಿಲ್ಲಾ ಸುದ್ದಿಬೆಳಗಾವಿರಾಜಕೀಯ

ತಮ್ಮನ್ನು ನಿರ್ಲಕ್ಷಿಸಿದ್ದೇ ಹಿನ್ನೆಡೆಗೆ ಕಾರಣ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಹಿನ್ನಡೆಗೆ ತಮ್ಮನ್ನು ನಿರ್ಲಕ್ಷಿಸಿದ್ದೇ ಕಾರಣ ಎಂದು ಮಾಜಿ ಸಚಿವ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಸುವರ್ಣಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧಗಿಯಲ್ಲಿ ಜವಾಬ್ದಾರಿ ಕೊಟ್ಟಿದ್ದರು. 31ಸಾವಿರಕ್ಕೂ ಹೆಚ್ಚಚು ಮತಗಳ ಅಂತದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದೆ. ಮೇಲ್ಮನೆ ಚುನಾವಣೆಯಲ್ಲಿ ಪ್ರಚಾರ ಕರೆಯಲಿಲ್ಲ. ಬಿಜೆಪಿಗೆ ಓಟ್ ಹಾಕಿ ಎಂದು ನಾನು ಮನೆಯಲ್ಲೇ ಕೂತೆ ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗ್ರಾಮಸ್ವರಾಜ್ ಯಾತ್ರೆಗೂ ಕರೆಯಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ರಾಜ್ಯಾಧ್ಯಕ್ಷರು ಸೋಲಿನ ಕುರಿತು ಆತ್ಮಾವಲೋಕನ ಸಭೆ ನಡೆಸಬೇಕು. ಎಲ್ಲಾ ನಾಯಕರನ್ನು ಕರೆದು ಸೋಲಿಗೆ ಕಾರಣ ಕುರಿತು ಚರ್ಚಿಸಬೇಕು ಎಂದೂ ಯತ್ನಾಳ್ ಹೇಳಿದರು.

ವಿಜಯಪುರ ಪರಿಷತ್ ಚುನಾವಣೆಯಲ್ಲಿ ಎರಡನೇ ಪ್ರಾಶಸ್ತ್ಯದಲ್ಲಿ ಬಿಜೆಪಿ ಗೆಲವು ಹಿನ್ನಡೆಯಲ್ವಾ ಅನ್ನೋ ಪ್ರಶ್ನೆಗೆ ಬೆಳಗಾವಿಯಲ್ಲಿ ಶಾಸಕ ಬಸನಗೌಡ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಯಾಕೆ ಹಿನ್ನಡೆ ಆಗ್ತಿದೆ ಅಂದ್ರೆ ನಮ್ನನ್ನೆಲ್ಲ ನೆಗ್ಲೆಟ್ ಮಾಡಿದ್ದಾರೆ. ಸಿಂಧಗಿಯಲ್ಲಿ ಜವಾಬ್ದಾರಿ ಕೊಟ್ಟಿದ್ದರು 34 ಸಾವಿರ ವೋಟ್ನಲ್ಲಿ ಗೆಲ್ಲಿಸಿದ್ದೆ. ಈ ಚುನಾವಣೆಗೆ ಪ್ರಚಾರಕ್ಕೆ ಕರೆಯಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಸಿಂಧಗಿ ಹೊಣೆ ಕೊಟ್ಟಿದ್ದಕ್ಕೆ 34,000 ಮತದಿಂದ ಗೆಲ್ಲಿಸಿದ್ದೆ. ಈ ಬಾರಿ MLC ಚುನಾವಣೆ ಪ್ರಚಾರಕ್ಕೆ ನನ್ನನ್ನ ಕರೆಯಲಿಲ್ಲ. ಬಿಜೆಪಿಗೆ ಓಟ್ ಹಾಕಿ ಎಂದು ಹೇಳಿ ಮನೆಯಲ್ಲಿ ಕೂತೆ. ಯಡಿಯೂರಪ್ಪನವರು ಕೈಗೊಂಡ ಯಾತ್ರೆಗೂ ಕರೆಯಲಿಲ್ಲ. ಸೋಲಾಗಿರುವ ಕಡೆ ಅತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜ್ಯಧ್ಯಕ್ಷರು ಸೋಲಿನ ಬಗ್ಗೆ ಚರ್ಚೆ ಮಾಡಬೇಕು. ಎಲ್ಲಾ ನಾಯಕರನ್ನ ಕರೆದು ಸೋಲಿನ ಬಗ್ಗೆ ಚರ್ಚಿಸಬೇಕು ಎಂದು ಬೆಳಗಾವಿಯಲ್ಲಿ ಶಾಸಕ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಪದೇ ಪದೆ ಭೇಟಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಯತ್ನಾಳ್, ಎಲ್ಲಾ ನವಗ್ರಹಗಳು ಇರುತ್ತೆ ಅದಕ್ಕೆ ಶಾಂತಿ ಮಾಡಬೇಕಾಗುತ್ತೆ. ರಾಹು ಕೇತು ಎರಡು ದೊಡ್ಡ ಗ್ರಹಗಳು. ಗ್ರಹಗಳಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆಯಾಗಬಾರದು. ಸಿಎಂ ಮೊನ್ನೆ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದಾರೆ. ಈಗ ರಾಹು, ಕೇತು ಶಾಂತವಾಗುತ್ತೆ ಎಂದರು.

ಇನ್ನು ನೀವು ಮಂತ್ರಿಯಾಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಾಮಾನ್ಯ MLA, ನಮ್ಮನ್ನೆಲ್ಲಿ ಮಂತ್ರಿ ಮಾಡ್ತಾರೆ. ನಮ್ಮಂತ ಅಪ್ರಾಮಾಣಿಕ ಭ್ರಷ್ಟರನ್ನೆಲ್ಲಿ ಮಂತ್ರಿ ಮಾಡ್ತಾರೆ. ಪ್ರಾಮಾಣಿಕರನ್ನ ಸಚಿವರನ್ನಾಗಿ ಮಾಡುತ್ತಾರೆ. ಬದಲಾವಣೆ ಮಾಡದಿದ್ದರೆ ಆ ಕಡೆ ಹೋಗ್ತೀವಿ ಎಂದು ಮಾರ್ಮಿಕವಾಗಿ ನುಡಿದಿದ್ದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ವಾಗ್ಧಾಳಿ ನಡೆಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button