ಜಿಲ್ಲಾ ಸುದ್ದಿದಾವಣಗೆರೆ
ದಾವಣಗೆರೆಯಲ್ಲೂ ಎಸಿಬಿ ದಾಳಿ: ಪರಿಶೀಲನೆ ಮುಂದುವರಿಕೆ

ದಾವಣಗೆರೆ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಟಿ. ರುದ್ರೇಶಪ್ಪ ಅವರ ಮನೆ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆದಿದೆ.
ಚನ್ನಗಿರಿ ತಾಲೂಕಿನ ಜಿಲ್ಲೆಯ ಸಂತೆಬೆನ್ನೂರು ಸಮೀಪದ ತಣ್ಣಿಗೇರಿಯಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆದಿದೆ.
ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಟಿ. ರುದ್ರೇಶಪ್ಪ ಅವರ ಮನೆ ಮೇಲೆಯೂ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆಸಿದೆ. ರುದ್ರೇಶಪ್ಪ ಅವರು ಹೊಂದಿದ್ದಾರೆ ಎನ್ನಲಾದ ದಾವಣಗೆರೆ, ಶಿವಮೊಗ್ಗದಲ್ಲಿರುವ ಚಾಲುಕ್ಯ ನಗರದ 4ನೇ ತಿರುವಿನಲ್ಲಿರುವ ಮನೆ ಹಾಗೂ ಗದಗನ ಬಾಡಿಗೆ ಮನೆ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಅಧಿಕಾರಿ ರುದ್ರೇಶನನ್ನು ಪಕ್ಕದಲ್ಲಿ ಕೂರಿಸಿಕೊಂಡು 8 ಕ್ಕೂ ಅಧಿಕ ಸಿಬ್ಬಂದಿಯು ಕಡತಗಳು, ಕಂಪ್ಯೂಟರ್ ನಲ್ಲಿ ಇರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.




