ಮನರಂಜನೆಸಿನಿಮಾಸೆಲೆಬ್ರಿಟಿ

Priyanka Chopra: ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಮಧ್ಯೆ ಬಿರುಕು ಮೂಡಿದೆಯೇ?

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಅಮೇರಿಕನ್ ಗಾಯಕ ನಿಕ್ ಜೋನಸ್ ಅವರನ್ನು ವಿವಾಹವಾಗಿ ಸಂತೋಷವಾಗಿದ್ದಾರೆ. ಯಾವುದೇ ಸಭೆ ಸಮಾರಂಭಕ್ಕೆ ಈ ಜೋಡಿ ಕೈಕೈಹಿಡಿದುಕೊಂಡು ಹೋಗುವುದನ್ನು ಕಂಡರೆ ಎಲ್ಲರ ಕಣ್ಣು ಕುಕ್ಕುತ್ತದೆ. ಅಂತಹದರಲ್ಲಿ ಇದೀಗ ಈ ಜೋಡಿಗಳ ಮಧ್ಯೆ ಬಿರುಕು ಮೂಡಿದೆಯೇ ಎಂಬ ಅನುಮಾನ ಶುರುವಾಗಿದೆ.

ಯಾಕೆಂದರೆ ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಇನ್ ಸ್ಟಾಗ್ರಾಂ ಮತ್ತು ಟ್ವೀಟರ್ ಖಾತೆಯಲ್ಲಿ ತಮ್ಮ ಕೊನೆಯ ಹೆಸರುಗಳಾದ ‘ಚೋಪ್ರಾ’ ಮತ್ತು ‘ಜೋನಾಸ್’ ಅನ್ನು ತೆಗೆದುಹಾಕಿದ್ದಾರೆ. ಈ ಬಗ್ಗೆ ನಟಿ ಯಾವುದೇ ವಿಚಾರ ತಿಳಿಸಿಲ್ಲ. ಹಾಗಾಗಿ ಇದು ಅಭಿಮಾನಿಗಳಲ್ಲಿ ಆಘಾತವನ್ನುಂಟುಮಾಡಿದೆ. ಈ ಜೋಡಿಗಳ ಮಧ್ಯೆ ಬಿರುಕು ಮೂಡಿದೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಆದರೆ ಇದೀಗ ನಟಿ ಪ್ರಿಯಾಂಕಾ ಅವರ ಪತಿ ನಿಕ್ ಅವರ ಇನ್ ಸ್ಟಾಗ್ರಾಂನ ಪೋಸ್ಟ್ ನಲ್ಲಿ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್ ಗೆ ನಟಿ ಮಾಡಿದ ಕಾಮೆಂಟ್ ನೋಡಿದ ಮೇಲೆ ಇವರ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂಬುದು ಖಾತ್ರಿಯಾಗಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button