ಜಿಲ್ಲಾ ಸುದ್ದಿಬಾಗಲಕೋಟೆ
ಗೋದಾಮು ಟಿವಿ ಕೇಬಲ್ ಕಂಟ್ರೋಲ್ ರೂಮ್ ಗೆ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿ

ಬಾಗಲಕೋಟೆ: ಶಾರ್ಟ್ ಸರ್ಕ್ಯೂಟ್ ನಿಂದ ಗೋದಾಮು ಹಾಗೂ ಟಿವಿ ಕೇಬಲ್ ಕಂಟ್ರೋಲ್ ರೂಮ್ ಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಎಪಿಎಮ್ ಸಿಯಲ್ಲಿನ ಮಳಿಗೆಯಲ್ಲಿರುವ ಗೋದಾಮುವೊಂದರಲ್ಲಿ ಘಟನೆ ನಡೆದಿದೆ. ಗೋದಾಮು ಹಾಗೂ ಕೇಬಲ್ ಕಂಟ್ರೋಲ್ ರೂಮ್ ಸಂಜಯ್ ಸಿಂಗ್ ರಜಪೂತ ಎಂಬುವರಿಗೆ ಸೇರಿದೆ.
ಬೀಳಗಿ ಪಟ್ಟಣ ಹಾಗೂ ತಾಲ್ಲೂಕಿನ ಕೆಲ ಭಾಗದಲ್ಲಿ ಟಿಬಿ ಕೇಬಲ್ ಸೇವೆ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಬೀಳಗಿ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.




