ಪೆಟ್ರೋಲ್ ಸುರಿದು ಕೊಟ್ಟಿಗೆಗೆ ಬೆಂಕಿ: ಎಮ್ಮೆ, ಕೋಳಿಗಳ ಸಾವು…!

ದಾವಣಗೆರೆ: ಪೆಟ್ರೋಲ್ ಸುರಿದು ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ದುಬಾರಿ ಬೆಲೆಯ ಎಮ್ಮೆ ಮತ್ತು ಕೋಳಿಗಳು ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಹುಚ್ಚವ್ವನಹಳ್ಳಿ ವಡ್ಡರಹಟ್ಟಿಯಲ್ಲಿ ನಡೆದಿದೆ.
ರೈತ ಹನುಮಂತಪ್ಪ ಅವರ ಕೊಟ್ಟಿಗೆಗೆ ರಾತ್ರಿ ಬೆಂಕಿ ಹಚ್ಚಿದ ಪರಿಣಾಮ ದುಬಾರಿ ಬೆಲೆಯ ಮುರ್ರಾ ತಳಿಯ ಒಂದು ಎಮ್ಮೆ ಮತ್ತು ಇಪ್ಪತ್ತಕ್ಕೂ ಹೆಚ್ಚು ಕೋಳಿಗಳು ಸಾವು ಕಂಡಿದ್ದು, 1.80 ಲಕ್ಷಕ್ಕೂ ಅಧಿಕಹಾನಿ ಸಂಭವಿಸಿದೆ. ಮತ್ತೊಂದು ಎಮ್ಮೆ ಸಂಪೂರ್ಣ ಗಾಯಗೊಂಡಿದೆ.
ಈ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿರುವ ರೈತ ಹನುಮಂತಪ್ಪ ಅವರಿಗೆ ಸಮಾಜ ಕಲ್ಯಾಣ ಮತ್ತು ಪಶು ಸಂಗೋಪನಾ ಇಲಾಖೆ ನ್ಯಾಯ ಒದಗಿಸಬೇಕು ಮತ್ತು ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕೆಂದು ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, ವಿಎನ್.ಪ್ರಕಾಶ್, ಮಳಲಕೆರೆ ಸಿದ್ದೇಶ್,ರಜಾಕ್ ಒತ್ತಾಯಿಸಿದ್ದಾರೆ.
ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆ ಕಾರ್ಯ ಮುಂದುವರಿದಿದೆ.




