ಜಿಲ್ಲಾ ಸುದ್ದಿಬಾಗಲಕೋಟೆ
ಗಣೇಶ್ ವಿಸರ್ಜನೆ ವೇಳೆ ಡಿಜೆ ಹಚ್ಚುವ ವಿಚಾರಕ್ಕೆ ಪಿಎಸ್ಐ ಗ್ರಾಮಸ್ಥರ ಮಧ್ಯೆ ವಾಗ್ವಾದ

ಬಾಗಲಕೋಟೆ: 9ನೇ ದಿನದ ಗಣೇಶ ವಿಸರ್ಜನೆ ವೇಳೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿ ತಡರಾತ್ರಿ ಡಿಜೆ ಹಚ್ಚುವ ವಿಚಾರಕ್ಕೆ ಪಿ.ಎಸ್.ಐ ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದಿದೆ.
ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಿನ್ನೆ ರಾತ್ರಿ ಗಣೇಶ್ ವಿಸರ್ಜನೆ ಕಾರ್ಯಕ್ರಮವಿತ್ತು. ಈ ವೇಳೆ ಗಣೇಶ್ ಮಂಡಳಿಯವರು ಡಿಜೆ ಹಚ್ಚಲು ಮುಂದಾದಾಗ ಕಲಾದಗಿ ಪಿಎಸ್ಐ ರವಿ ಪವಾರ್ ತಡೆದಿದ್ದಾರೆ. ಈ ವೇಳೆ ವಾಗ್ವಾದ ನಡೆದಿದ್ದು.ಎಲ್ಲರಿಗೂ ಡಿಜೆ ಪರವಾನಿಗೆ ಕೊಟ್ಟು, ನಮಗೆ ಮಾತ್ರ ಯಾಕೆ ಬೇಡ ಎಂದು ಗ್ರಾಮಸ್ಥರು ಪಿ.ಎಸ್.ಐ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಗಣೇಶ ಮಂಡಳಿಯವರು.ಎಲ್ಲ ಕಡೆ ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚಲು ಅನುಮತಿ ನೀಡಿದ್ದಾರೆ.ಮಹರ್ಷಿ ವಾಲ್ಮೀಕಿ ಸಂಘದ ಗಣೇಶ ವಿಸರ್ಜನೆಗೆ ಮಾತ್ರ ಡಿಜೆ ನಿಷೇಧ ಏಕೆ ಎಂದು, ಗಣೇಶ ವಿಸರ್ಜನೆ ಕಾರ್ಯಕ್ರಮ ಬಿಟ್ಟು, ಧರಣಿ ನಡೆಸಿದರು.ಪ್ರತಿಭಟನಾ ನಿರತರಿಗೆ ಗ್ರಾಮಸ್ಥರು ಸಾಥ್ ನೀಡಿದ್ದರು. ಬಳಿಕ ಸಮಾಧಾನಪಡಿಸಿ ಕೊನೆಗೆ ಗಣೇಶ್ ವಿಸರ್ಜನೆ ಮಾಡಿದ್ದಾರೆ.




