Latestಕ್ರಿಕೆಟ್ಕ್ರೀಡೆ

ಐದು ಸಾವಿರ ಕೋಟಿ ಟಾರ್ಗೆಟ್: ಅರಬ್ಬರ ನಾಡಲ್ಲಿ ಇಂದಿನಿಂದ ಐಪಿಎಲ್ ಹಂಗಾಮ

ಬೆಂಗಳೂರು : ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿ ಆಗುವುದರೊಂದಿಗೆ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಉಳಿದ ಪಂದ್ಯಗಳಿಗೆ ಚಾಲನೆ ದೊರೆಯಲಿದೆ.

ಕಳೆದ ಬಾರಿ ಕೊರೊನಾ ನಡುವೆಯೂ ನಾಲ್ಕು ಸಾವಿರ ಕೋಟಿ ಆದಾಯ ಗಳಿಸಿದ್ದ ಬಿಸಿಸಿಐ ಈ ಬಾರಿ ಮತ್ತೆ ಒಂದು ಸಾವಿರ ಕೋಟಿ ಗಳಿಸುವ ಗುರಿಹೊಂದಿದೆ.
ಈ ಬಾರಿ ಅಂಗಣಕ್ಕೆ ಸೀಮಿತ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ.

ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ ಮುಂಬರುವ ವಿಶ್ವಕಪ್ ಗಮನದಲ್ಲಿರಿಸಿಕೊಂಡು ತಂಡವನ್ನು ಅಂಗಣಕ್ಕಿಳಿಸಲಿದ್ದಾರೆ. ಯಾರೆಲ್ಲ ಭಾರತ ತಂಡದಲ್ಲಿದ್ದಾರೋ ಆ ಆಟಗಾರರು ಹೆಚ್ಚಿನ ಅವಕಾಶವನ್ನು ಪಡೆಯುವುದು ಖಚಿತವಾಗಿದೆ.

ಕಳೆದ 13 ಆವೃತ್ತಿಗಳಲ್ಲಿ ಈ ಎರಡೂ ತಂಡಗಳು ಉತ್ತಮ ರೀತಿಯ ಕ್ರಿಕೆಟ್ ಪ್ರದರ್ಶನ ನೀಡಿದ್ದು ಸಾಕಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಇದರಿಂದಾಗಿ ಎರಡು ತಂಡಗಳ ನಡುವಿನ ಪಂದ್ಯ ಎಂದಾಗ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿರುತ್ತಾರೆ.

ಚೆನ್ನೈ ಸೂಪರ್ ಕಿಂಗ್ಸ್ ರಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಹಾಲಿ ಚಾಂಪಿಯನ್ ಮುಂಬೈ ನಾಲ್ಕನೇ ಸ್ಥಾನದಲ್ಲಿದೆ. 30 ಪಂದ್ಯಗಳ ನಂತರ ಮರುಚಾಲನೆಗೊಂಡ ಐಪಿಎಲ್, ಹೊಸ ಪ್ರತಿಭೆಗಳ ಹುಟ್ಟಿಗೆ ಕಾರಣವಾಗಿದೆ.

ಧೋನಿ ಭಾರತ ತಂಡದಲ್ಲಿ ಪ್ರಭುತ್ವ ಸಾಧಿಸಿರಬಹುದು ಆದರೆ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅವರೇ ಯಶಸ್ವಿ ನಾಯಕ. ಇತ್ತ ತಂಡಗಳು ಇದುವರೆಗೂ 32 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 19 ಪಂದ್ಯಗಳನ್ನು ಗೆದ್ದಿದ್ದರೆ, ಚೆನ್ನೈ ಗೆದ್ದಿರುವುದು 13 ಪಂದ್ಯಗಳನ್ನು

Spread the love

Related Articles

Leave a Reply

Your email address will not be published. Required fields are marked *

Back to top button