ಚಿಕ್ಕಮಗಳೂರು
ಸರ್ಫೆಸಿ ಕಾಯ್ದೆ ವಿರೋಧಿಸಿ ಅಂಚೆಕಾರ್ಡ್ ಚಳವಳಿ

ಚಿಕ್ಕಮಗಳೂರು: ರೈತರ ಬ್ಯಾಂಕ್ ಸಾಲಕ್ಕೆ ಅನ್ವಯಿಸುವ ಸರ್ಫೆಸಿ ಕಾಯ್ದೆಯನ್ನು ವಿರೋಧಿಸಿ ಕಾಫಿ ಬೆಳೆಗಾರರು ಅಂಚೆಕಾರ್ಡ್ ಚಳವಳಿ ಆರಂಭಿಸಿದ್ದು, ಆಲ್ದೂರಿನ ಅಂಚೆ ಕಚೇರಿ ಮೂಲಕ 1600 ಕಾರ್ಡ್ ಗಳನ್ನು ಬರೆದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಪೋಸ್ಟ್ ಕಳುಹಿಸಿದ್ದಾರೆ.
ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಲವ, ಗ್ರಾಪಂ ಸದಸ್ಯರಾದ ಬಿ.ಬಿ.ಅಶೋಕ್, ಪ್ರತಿಭಾ ನವೀನ್ ಇದ್ದರು. ಬೆಳೆಗಾರರು ಬರೆದ ಪೋಸ್ಟ್ ಕಾರ್ಡ್ಗಳನ್ನು ಅಂಚೆಕಚೇರಿಗೆ ರವಾನಿಸುವಲ್ಲಿ ಹವ್ವಳ್ಳಿಯ ಸುಶಾಂತಗೌಡ ಜವಾಬ್ದಾರಿ ನಿರ್ವಹಿಸಿದ್ದಾರೆ.




