Breaking Newsರಾಮನಗರ
ಮಾಗಡಿ: ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ನೆರವು

ರಾಮನಗರ: ಕೋವಿಡ್ ನಿಂದ ಮೃತಪಟ್ಟವರ ದುಃಖದಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯವೆಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ಮಾಗಡಿ ಕ್ಷೇತ್ರದ ಕುದೂರು ಹೋಬಳಿಯ ಶ್ರೀಗಿರಿಪುರ, ಚಿಕ್ಕಮಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೋನದಿಂದ ಮೃತಪಟ್ಟ 11 ಜನರ ಮನೆಗಳಿಗೆ ಭೇಟಿ ನೀಡಿ ಸಹಾಯ ಹಸ್ತ ಎಂಬ ಕಾರ್ಯಕ್ರಮದ ಮೂಲಕ ತಲಾ 10 ಸಾವಿರ ಪರಿಹಾರ ನೀಡಿ, ಸಾಂತ್ವನ ಹೇಳಿದ ಅವರು ನೊಂದ ಕುಟುಂಬಗಳಲ್ಲಿ ಆತ್ಮಸ್ಥೈರ್ಯ ತುಂಬುವು ಸಹಾಯಹಸ್ತ ಕಾರ್ಯಕ್ರಮ ಉದ್ದೇಶವೆಂದರು.
ಗ್ರಾಮದ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಕುಶಲೋಪರಿ ವಿಚಾರಿಸಿದ ಅವರು, ನಂತರ ಕೆಲ ಬಡ ಹಾಗೂ ಕಾರ್ಮಿಕ ಕುಟುಂಬಗಳಿಗೆ ಫುಡ್ ಕಿಟ್ ಮತ್ತು ಔಷಧಿ ಕಿಟ್ಗಳನ್ನು ವಿತರಿಸಿದರು.
