ಚಿಕ್ಕಮಗಳೂರು

ದತ್ತಪಾದುಕೆ ಪೂಜೆಗೆ ಮುಂದಾದ ಕಾಳಿಸ್ವಾಮಿ; ಅವಕಾಶ ನಿರಾಕರಣೆ

ಚಿಕ್ಕಮಗಳೂರು: ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ಭೇಟಿ ನೀಡಿದ್ದ ಕಾಳಿ ಸ್ವಾಮೀಜಿ ದತ್ತಪಾದುಕೆ ದರ್ಶನ ಮಾಡಿದ ಬಳಿಕ ಪೂಜೆಗೆ ಮುಂದಾದಾಗ ಅಧಿಕಾರಿಗಳು ಅವಕಾಶ ನಿರಾಕರಣೆ ಮಾಡಿದರು.

ಬಳಿಕ ದತ್ತಗುಹೆಯಲ್ಲಿ ಭಜನೆಗೆ ಮುಂದಾದ ಶ್ರೀರಾಮ ಸೇನೆ ಕಾರ್ಯಕರ್ತರು ಅನುಮತಿ ನೀಡುವವರೆಗೆ ಹೊರಹೋಗಲ್ಲ ಎಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು.

ಋಷಿಕುಮಾರ್ ಸ್ವಾಮೀಜಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಶ್ರೀರಾಮಸೇನೆಯ ಗಂಗಾಧರ ಕುಲಕರ್ಣಿ ಮತ್ತು ಕಾರ್ಯಕರ್ತರು ಆಗ್ರಹಿಸಿದರು.

ಸೆ.28 ರಂದು 2018ರ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಇಂದು ದತ್ತಪಾದುಕೆ ದರ್ಶನಕ್ಕೆ ಶ್ರೀರಾಮಸೇನೆ ಕಾರ್ಯಕರ್ತರು ತೆರಳಿದ್ದರು.

ಸ್ವಾಮೀಜಿ ಭೇಟಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಸ್ಥಳದಲ್ಲಿ ಎ ಸಿ ನಾಗರಾಜ್, ತಹಸೀಲ್ದಾರ್ ಕಾಂತರಾಜ್ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button