ಮನರಂಜನೆಸಿನಿಮಾಸೆಲೆಬ್ರಿಟಿ

Prabhu Deva: ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ನಟ ಪ್ರಭುದೇವ್

‘ಪೋನ್ ಮಾಣಿಕ್ಯವೆಲ್ ‘ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ ನಟ ಪ್ರಭುದೇವ್ ಅವರು ಈಗ ಮತ್ತೊಮ್ಮೆ ಇದೇ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಸ್ಯಾಮ್ ರೋಡ್ರಿಗಸ್ ಅವರ ನಿರ್ದೇಶನದ ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಭುದೇವ್ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದಾರಂತೆ. ಇದು ಪೊಲೀಸ್ ಅಧಿಕಾರಿಯ ಕಥೆಯನ್ನು ಒಳಗೊಂಡಿದ್ದು, ಒಬ್ಬ ಐಪಿಎಸ್ ಅಧಿಕಾರಿಯ ಜೀವನದ ಸುತ್ತ ಸುತ್ತುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.

ನಟ ಪ್ರಭುದೇವ್ ಅವರು ಈ ಚಿತ್ರದ ಸ್ಕ್ರಿಪ್ಟ್ ಅನ್ನು ಇಷ್ಟಪಟ್ಟಿದ್ದು, ತಕ್ಷಣ ಡೇಟ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ. ಇದರ ಚಿತ್ರೀಕರಣ ಚೆನ್ನೈ ನಲ್ಲಿ ನಡೆಯಲಿದೆ. ಈ ಚಿತ್ರದಲ್ಲಿ ತಮಿಳು ಬಿಗ್ ಬಾಸ್ ಖ್ಯಾತಿಯ ಶರೀಕ್, ವಿಟಿವಿ ಗಣೇಶ್, ಮಲಯಾಳಂ ನಟರಾದ ಬಿನು ಪಪ್ಪು ಮತ್ತು ಲಿಯೋನಾ ಲಿಶೋಯಾ, ಜಾನ್ ವಿಜಯ್ ಮುಂತಾದವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button