ಅಪಘಾತಕ್ಕೀಡಾದ ಪೊಲೀಸ್ ಅಧಿಕಾರಿಯ ಪತ್ನಿಗೆ ಪರಿಹಾರದ ಚೆಕ್ ವಿತರಣೆ

ಚಿಕ್ಕಮಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಪತ್ನಿಗೆ ಪರಿಹಾರದ ಚೆಕ್ ವಿತರಿಸಲಾಯಿತು. ಹಿರೇಗೌಜ ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದರಾಮಪ್ಪ ನಿಧನರಾಗಿದ್ದರು.
ಅವರ ಪತ್ನಿ ವಾಣಿ ಅವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಚಿಕ್ಕಮಗಳೂರು ಪ್ರಾದೇಶಿಕ ಕಚೇರಿಯಿಂದ ವಿಮಾ ಮೊತ್ತ 30 ಲಕ್ಷ ಚೆಕ್ ಅನ್ನು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಮಾಚಿಂದ್ರ ಸಮ್ಮುಖದಲ್ಲಿ ಬ್ಯಾಂಕಿನ ಮಹಾಪ್ರಬಂಧ ರಾಜೇಶ್ ಗುಪ್ತಾ ಹಸ್ತಾಂತರ ಮಾಡಿದ್ದರು.
ಎಸ್ಪಿ ಅಕ್ಷಯ್ ಕುಮಾರ್ ಭಾರತೀಯ ಸ್ಟೇಟ್ ಬ್ಯಾಂಕ್ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಿದೆ. ಇಂತಹ ಮೌಲ್ಯವುಳ್ಳ ಸೌಲಭ್ಯಗಳ ಬಗ್ಗೆ ತಮ್ಮ ಎಲ್ಲಾ ಸಿಬ್ಬಂದಿಗೆ ಅರಿವು ಮೂಡಿಸಲು ಬ್ಯಾಂಕ್ನ ಅಧಿಕಾರಿಗಳಿಗೆ ತಿಳಿಸಿದರು.
ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣ ಹೊಸಮನೆ ಬಡಾವಣೆ ಶಾಖೆಯ ಮುಖ್ಯವ್ಯವಸ್ಥಾಪಕ ಎಂ ಬೊಪ್ಪಣ, ಬ್ಯಾಂಕ್ ಅಧಿಕಾರಿ ಅಮೀತ್ ಹಾಗೂ ಮೃತ ಸಿಬ್ಬಂದಿಗಳು ಕುಟುಂಬಸ್ಥರು ಹಾಜರಿದ್ದರು.




