ಚಿಕ್ಕಮಗಳೂರು

ಉಳಿವಿಗಾಗಿ ಒಂದಾಗಿ ಸಾಗೋಣ ಘೋಷಣೆಯಡಿ ಬಿಲ್ಲವ ಸಮಾಜ ಸಮ್ಮಿಲನ ನ.21ಕ್ಕೆ

ಚಿಕ್ಕಮಗಳೂರು: ಉಳಿವಿಗಾಗಿ ಒಂದಾಗಿ ಸಾಗೋಣ ಘೊಷಣೆಯಡಿ ಬಿಲ್ಲವ ಸಮಾಜದಿಂದ ʼಸಮಾಜ ಸಮ್ಮಿಲನʼ ಕಾರ್ಯಕ್ರಮ ನ.21ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಸಂಚಾಲಕ ಬಿ ರಾಜಪ್ಪ ತಿಳಿಸಿದರು.

ಬೆಳಗ್ಗೆ 10 ಗಂಟೆಗೆ ಸಮಾಜದ ಬಾಂಧವರು ಕುವೆಂಪು ಕಲಾಮಂದಿರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಲಿದ್ದಾರೆ. ಪುನಃ ಕಲಾಮಂದಿರದ ಆವರಣಕ್ಕೆ ಸೇರಲಿದ್ದಾರೆ. ಆರ್ಯ ಈಡಿಗ ಸಂಸ್ಥಾನದ ನಿಯೋಜಿತ ಸ್ವಾಮೀಜಿ ವಿಖ್ಯಾತಾನಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಜನಾಂಗದ ಒಗ್ಗಟ್ಟು ಹಾಗೂ ಜಿಲೆಯ ಸಂಘಟನಾತ್ಮಕ ವಿಷಯಗಳ ಬಗ್ಗೆ ಸಭೆಯಲ್ಲಿ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷ ಎಚ್ ಎಂ ಸತೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಿ ಟಿ ರವಿ ಉದ್ಘಾಟಿಸಲಿದ್ದಾರೆ. ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ತಿಮ್ಮೇಗೌಡ, ಜೆ ಪಿ ಪ್ರತಿಷ್ಠಾನದ ರಾಜ್ಯ ಅಧ್ಯಕ್ಷ ಜೆ ಪಿ ಸುಧಾಕರ್ ಮುಂತಾದವರು ಪಾಲ್ಗೊಳ್ಳುವುದಾಗಿ ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button