Breaking Newsಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡದ ಅತಿವೃಷ್ಠಿ ಹಾನಿ ಪ್ರದೇಶಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ

ಧಾರವಾಡ : ಕಳೆದ ಜುಲೈ ತಿಂಗಳಲ್ಲಿ ಸುರಿದ ಬಾರಿ ಮಳೆಯಿಂದಾಗಿ ಹಾನಿಗೆ ಒಳಗಾದ ಧಾರವಾಡ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಇಂದು ಭೇಟಿ ಪರಿಶೀಲನೆ ನಡೆಸಿತು. ಮೊದಲಿಗೆ ಜಿಲ್ಲೆಯ ಅಳ್ನಾವಾರ ತಾಲೂಕಿನ ಕಂಬಾರಗಣವಿ ಗ್ರಾಮಕ್ಕೆ ಭೇಟಿ ನೀಡಿದ ತಂಡ ಮನೆಗಳ ಹಾನಿಯ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ‌ಬಳಿಕ ಅಳ್ನಾವಾರಕ್ಕೆ ಭೇಟಿ ನೀಡಿ ಇಂದಿರಮ್ಮ ಕೆರೆಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ಕಲಘಟಗಿಯ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿಯವರು ಕೆರೆಯಿಂದ ಆದ ಹಾನಿಯ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.

ಭಾರತ ಸರ್ಕಾರದ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ ಜೆ, ಕೇಂದ್ರ ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶಕುಮಾರ್ ಅವರನ್ನು ಒಳಗೊಂಡ ಅಧ್ಯಯನ ತಂಡ ಇದಾಗಿದ್ದು, ಈಗ ಅಧ್ಯಯನ ತಂಡವು ಅಳ್ನಾವರ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದೆ. ಅಳ್ನಾವಾರ ತಾಲೂಕಿನ ಕಂಬಾರಗಣವಿ ಗ್ರಾಮಕ್ಕೆ ಮೊದಲು ಭೇಟಿ ನೀಡುವ ಮೂಲಕ ಮಳೆ ಹಾನಿಯ ಪ್ರದೇಶ ವೀಕ್ಷಣೆ ಕಾರ್ಯವನ್ನು ಆರಂಭ ಮಾಡಿತ್ತು.

ಮಳೆ ಹಾನಿ ಪ್ರದೇಶಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ:

ಅತಿವೃಷ್ಠಿ ಕೇಂದ್ರ ಅಧ್ಯಯನ ತಂಡವು ಅಳ್ನಾವಾರ ತಾಲೂಕಿನ ಎಳು ಮಳೆ ಹಾನಿ ಪ್ರದೇಶಗಳಿ‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿತ್ತು, ಮೊದಲನೆಯ ಭಾಗವಾಗಿ ತಾಲೂಕಿನ ಕಂಬಾರಗಣವಿ ಗ್ರಾಮದ ಜೈಭಾರತ್ ಕಾಲನಿಗೆ ಭೇಟಿ ನೀಡಿ ಮನೆಗಳ ಹಾನಿ ಕುರಿತು ಅಧಿಕಾರಿಗಳಿಂದ ಹಾಗೂ ಮನೆ ಕಳೆದುಕೊಂಡ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಇಂದಿರಮ್ಮ ಕೆರೆಯ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಕೆರೆಯಿಂದ ಹಾನಿಗೆ ಒಳಗಾದ ಕೃಷಿ ಭೂಮಿ ಸೇರಿದಂತೆ ರಸ್ತೆ, ಸೇತುವೆ ಹಾನಿ ಪ್ರದೇಶ ಪರಿಶೀಲನೆ ಮಾಡಿದರು. ನಂತರ ಅಳ್ನಾವರದ ಡೌಗಿ ನಾಲಾ, ಪುರ ಗ್ರಾಮದ ಸೇತುವೆ, ಅಳ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಣಚಿ ಗ್ರಾಮದ ಬಳಿಯ ಸೇತುವೆ,‌ ಅರವಟಗಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಹಾನಿಯ ಕುರಿತು ಮಾಹಿತಿ ಪಡೆದುಕೊಂಡರು.

ಇನ್ನೂ ನಿರಂತರ ಮಳೆಯಿಂದಾಗಿ ಧಾರವಾಡ ನಗರದ‌ಲ್ಲಿಯು ಹಾನಿಯನ್ನುಂಟಾಗಿದ್ದು, ಧಾರವಾಡದಲ್ಲಿಯು ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ಮಾಡಲಿದೆ. ಧಾರವಾಡದ ಕುಮಾರೇಶ್ವರ ನಗರದ ರಸ್ತೆ ಹಾನಿ ಸ್ಥಳಕ್ಕೆ ಭೇಟಿ‌‌ ನೀಡಿ ಮಾಹಿತಿ ಕಲೆ‌ ಹಾಕಲಿದೆ. ಈ ವೇಳೆ ನಗರದಲ್ಲಿ ಮಳೆಗೆ ಹಾನಿಯದ ಮನೆಗಳ ಕುರಿತು ಜಿಲ್ಲಾಧಿಕಾರಿಗಳಿಂದಲ್ಲೂ ಅಧಿಕಾರಿಗಳ ತಂಡ ಪಡೆದುಕೊಳ್ಳಲಿದೆ.

4 ಗಂಟೆಯ ನಂತರ ನವಲಗುಂದ ತಾಲ್ಲೂಕಿಗೆ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಭೇಟಿ:

ಮಧ್ಯಾಹ್ನ 4 ಗಂಟೆಗೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಲಿದ್ದು, ತಾಲೂಕಿನ ಆರೇಕುರಹಟ್ಟಿಯ ರಸ್ತೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡುತ್ತಾರೆ. ಬಳಿಕ ಯಮನೂರು ಗ್ರಾಮದ ಹೆಸರುಬೇಳೆ, ಉಳ್ಳಾಗಡ್ಡಿ ಬೆಳೆಹಾನಿ ಪ್ರದೇಶ ಭೇಟಿ ಕೊಟ್ಟು ಪರಿಶೀಲನೆ ಮಾಡಲಿದ್ದಾರೆ. ನಂತರ ಗಂಟೆಗೆ ನವಲಗುಂದದ ರೋಣ ಕ್ರಾಸಿನಲ್ಲಿ ತೋಟಗಾರಿಕೆ ಬೆಳೆ ಹಾನಿ ಸ್ಥಳಕ್ಕೆ ತೆರಳಿ ವೀಕ್ಷಿಸಿದ ಬಳಿಕ ಬಾಗಲಕೋಟ ಜಿಲ್ಲೆಗೆ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಪ್ರಯಾಣ ಮಾಡಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button