ಜಿಲ್ಲಾ ಸುದ್ದಿಮಹಿಳೆವಿಶೇಷಶಿಕ್ಷಣಹುಬ್ಬಳ್ಳಿ - ಧಾರವಾಡ

ಸಕಲ ಕಲೆಗಳನ್ನು ಬಲ್ಲ ಶಿಕ್ಷಕಿಯಿಂದ ಮಕ್ಕಳ ಶಿಕ್ಷಣಕ್ಕೆ ಸ್ಫೂರ್ತಿ : ಪಾಠ ಹೇಳಲೂ ಸೈ, ತಬಲಾ ಬಾರಿಸಲೂ ಸೈ

ಧಾರವಾಡ : ಗುರು ಬ್ರಹ್ಮ ಗುರು ವಿಷ್ಣು ಗುರು ದೆವೋ ಮಹೇಶ್ವರ ಗುರು ಸಾಕ್ಷತ್ ಪರ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. ಇಲ್ಲಿ ಪ್ರಮುಖವಾಗಿ ನಾವು ಗಮನಿಸಬೇಕು ಗುರುವಿಗೆ ಯಾವೆಲ್ಲ ಸ್ಥಾನ ನೀಡಲಾಗಿದೆ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಪ್ರತಿಯೊಬ್ಬರಿಗೆ ಪ್ರತಿಯೊಂದು ಹಂತದಲ್ಲಿ ಒಬ್ಬರು ಗುರು ಅಥವಾ ಶಿಕ್ಷಕ ಇದ್ದೇ ಇರುತ್ತಾನೆ. ಆದರೆ ಬಾಲ್ಯದಲ್ಲಿ ಸಿಗುವ ಗುರು ಅಥವಾ ಶಿಕ್ಷಕರನ್ನು ಯಾರು ಕೂಡಾ ಮರೆಯುವುದಿಲ್ಲ. ಹುಬ್ಬಳ್ಳಿಯ ರೇವಡಿಹಾಳ ಶಿಕ್ಷಕಿಯೊಬ್ಬರು ಸರ್ವ ಕಲೆಗಳನ್ನು ಮೈಗೂಡಿಸಿಕೊಂಡು ಮಕ್ಕಳ ಶಿಕ್ಷಣಕ್ಕೆ‌ ಸ್ಪೂರ್ತಿಯಾಗಿದ್ದು, ಗ್ರಾಮದ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿದ್ದಾರೆ.

ಶಿಕ್ಷಕ ವೃತಿಗೂ ಜೈ ತಬಲಾ ಬಾರಿಸಲು ಸೈ:

ಕಮಲಾ ನರಸರಿ ವೃತಿಯಲ್ಲಿ ಇವರು ಸರ್ಕಾರಿ ಶಾಲೆಯ ಶಿಕ್ಷಕರು, ಮೂಲತಃ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದವರು. ಚಿಕ್ಕಂದಿನಿಂದಲೇ ತಬಲಾ ವಾದ್ಯ ಕಡೆ ಹೆಚ್ಚು ಒಲವು ತೋರಿ ತಬಲಾ ಬಾರಿಸವುದನ್ನು ಕಲಿತಿದ್ದಾರೆ. ಚಿಕ್ಕವರಿದ್ದಾಗ ಇವರಿಗೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಜಾನ ಪದ ಹಾಡುತ್ತಾ ಚರ್ಮ ವಾದ್ಯ ನುಡಿಸೋರನ್ನ ನೋಡುತ್ತಾ ಆಕರ್ಷಣೆಗೆ ಒಳಗಾಗಿದ್ದರು. ಅಂದಿನಿಂದ ಅದು ಆಕರ್ಷಣೆಯಾಗಿ ಉಳಿಯದೇ ಪದವಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಸಂಗೀತ ವಿಷಯವನ್ನು ಅಧ್ಯಯನ ವಿಷಯವಾಗಿ ತೆಗೆದುಕೊಳ್ಳುವವರೆಗೆ ಹೋಗಿ, ಈಗ ಶಿಕ್ಷಕ ವೃತಿಯ ಜೊತೆಗೆ ತಬಲಾ ಬಡಿಯುವುದರಲ್ಲಿಯು ಸೈ ಅನ್ನಿಸಿಕೊಂಡಿದ್ದಾರೆ.

ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ತಬಲಾ ಮುಖಾಂತರ ವಿವಿಧ ಟ್ಯೂನ್ ಬಾರಿಸಿ ಸಾಧನೆ ಮಾಡಿದ್ದಾರೆ. ಶಿಕ್ಷಕ ವೃಂದದಲ್ಲಿ ಜರುಗುವ ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಅಲ್ಲದೆ ಗ್ರಾಮದ ಶಾಲೆಯ ಮಕ್ಕಳಿಗೆ ಬೀಡುವು ಸಿಕ್ಕಾಗ ತಬಲಾ ಬಾರಿಸವುದನ್ನು ಹೇಳಿಕೊಡುತ್ತಿದ್ದಾರೆ. ತಬಲಾ ಆಸಕ್ತಿ ಹೊಂದಿರುವ ಮಕ್ಕಳಿಗೆ ತಬಲಾ ಕುರಿತು ಹೇಳಿಕೊಡುತ್ತಿದ್ದು, ಗ್ರಾಮಸ್ಥರಿಗೂ ಸೇರಿದಂತೆ ಶಾಲೆಯ ಮಕ್ಕಳ ಅಚ್ಚು ಮೆಚ್ಚಿನ ಶಿಕ್ಷಿಕಿಯಾಗಿ ಕಮಲಾ ಟೀಚರ್ ಗುರುತಿಸಿಕೊಂಡಿದ್ದಾರೆ.

ಮನೆ ಮನೆಗೆ ತೆರಳಿ ಮಕ್ಕಳಿಗೆ ಪಾಠ:

ರಾಜ್ಯದಲ್ಲಿ ಕೊರೊನಾ ಮಾಹಾಮಾರಿ‌ ಮೊದಲನೇ ಅಲೆ ಹಾಗೂ ಎರಡನೇ ಅಲೆ ಬಂದ ಸಂದರ್ಭದಲ್ಲಿ, ಮನೆಯಲ್ಲಿ‌‌ ಎಲ್ಲರಂತೆ ಸುಮ್ಮನೆ ಕುಳಿತು ಕೊಳ್ಳದೆ ಶಾಲೆಯ ಮಕ್ಕಳಿಗೆ ಕೊರೊನಾ ಜಾಗೃತಿಯೊಂದಿಗೆ ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣ ನೀಡಿದ್ದಾರೆ. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂಬ ಒಂದೇ ಒಂದು ದೃಷ್ಠಿಕೋನದಿಂದ ಪ್ರತಿದಿನ ರೇವಡಿಹಾಳ ಗ್ರಾಮದ, ಸರ್ಕಾರಿ ಶಾಲೆಯ ಮಕ್ಕಳಿಗೆ ದಿನಕ್ಕೆ ಐದ ರಿಂದ ಹತ್ತು ಮನೆಗಳಂತೆ ಪಾಠವನ್ನು ಹೇಳಿಕೊಟ್ಟಿದ್ದಾರೆ. ಒಂದನೇ ತರಗತಿಯಿಂದ ಹಿಡಿದು ಮೂರನೇ ತರಗತಿಯ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಕುರಿತು ಪಾಠ ಮಾಡುತ್ತಾ ಬಂದಿರುವ ಕಮಲಾ ಟೀಚರ್ ಕಾರ್ಯವು ಗ್ರಾಮಸ್ಥರು ಸೇರಿದಂತೆ ಗ್ರಾಮದ ಮಕ್ಕಳ ಮೆಚ್ಚುಗೆ ‌ಪಡೆದುಕೊಂಡಿದ್ದಾರೆ.‌

ಶಿಕ್ಷಣ ನೀಡುವಲ್ಲಿ ಪರಿಣಿತ ಹೊಂದಿರುವ ಶಿಕ್ಷಕಿ

ಇನ್ನೂ ಶಾಲೆಯಲ್ಲಿ ಕಮಲಾ ಟೀಚರ್ ಶಿಕ್ಷಕಿಯಾಗಿದ್ದರು ಕೂಡಾ ಅವರು ಅದನ್ನು ಕೇವಲ ವೃತ್ತಿಯಾಗಿ ತೆಗೆದುಕೊಂಡಿಲ್ಲ. ತಮ್ಮ‌ ಮನೆಯ ಮಕ್ಕಳಂತೆ ಶಾಲೆಯ ಮಕ್ಕಳಿಗೂ ವಿಷಯ ಆಸಕ್ತಿ ಆಧಾರದ ಮೇಲೆ ಪಾಠ ಹೇಳಿಕೊಡುತ್ತಾ ಬರುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೂ ತುಂಬಾ ಸಹಾಯಕಾರಿಯಾಗುತ್ತಿದೆ. ಮಕ್ಕಳು‌ ಯಾವ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುವುದನ್ನು ಗುರುತ್ತಿಸಿವುದಲ್ಲದೆ ಅವರ ಪಾಲಕರುನ್ನು ಶಾಲೆಗೆ ಕರೆಯಿಸಿಕೊಂಡ ಮಕ್ಕಳ ಮುಂದಿನ‌‌ ಶಿಕ್ಷಣ ಬಗ್ಗೆ ಚರ್ಚೆ ನಡೆಸುತ್ತಾರೆ ಬಂದಿದ್ದಾರೆ. ಅಲ್ಲದೆ ಮಕ್ಕಳು ಮುಂದಿನ ದಿನಮಾನಗಳಲ್ಲಿ ಯಾವ ವಿಷಯ ತೆಗೆದುಕೊಂಡರೆ ಉತ್ತಮ ಸಾಧನೆ ಮಾಡಬಹುದು ಎಂಬುವುದರ ಕುರಿತು ಮಕ್ಕಳ ಪಾಲಕರಿಗೆ ತಿಳಿ ಹೇಳುತ್ತಾ ಬರುತ್ತಿದ್ದಾರೆ.

ಕಮಲಾ ಶಿಕ್ಷಕರ ಈ‌‌ ಕಾರ್ಯ ರೇವಡಿಹಾಳ ಗ್ರಾಮಸ್ಥರಿಗೆ ತುಂಬಾನೇ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಇಂತಹ‌‌ ಅಪರೂಪದ ಶಿಕ್ಷಕಿ‌ ನಮ್ಮ ಗ್ರಾಮದಲ್ಲಿ ಇರುವುದು ನಮ್ಮ ಪುಣ್ಯವೆನ್ನುತ್ತಾರೆ ಗ್ರಾಮಸ್ಥರು.‌

Spread the love

Related Articles

Leave a Reply

Your email address will not be published. Required fields are marked *

Back to top button