ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 3 ಲಕ್ಷ ಕ್ಯೂಸೆಕ್ ನೀರು; ನದಿ ತೀರದ ಜನರ ಸ್ಥಳಾಂತರ

ಬೆಳಗಾವಿ: ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಹಾಗೂ ಪಕ್ಕದ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಕೃಷ್ಣಾ ನದಿ ತಿರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 3 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕುಡಚಿ ಪಟ್ಟಣದ ಗ್ರಾಮೀಣ ಪ್ರದೇಶದ ಧರಣದ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ನದಿಯ ದಂಡದಲ್ಲಿ ವಾಸವಾಗಿರುವ ಕುಟುಂಬಗಳನ್ನು ಸ್ಥಳೀಯ ಕುಡಚಿ ಪೋಲಿಸ್ ಠಾಣೆಯ ಪಿಎಸ್ಐ ಶಿವರಾಜ ಧರಿಗೊಂಡ ಹಾಗೂ ಸಿಬ್ಬಂದಿ ಎಚ್ಚರಿಕ್ಕೆಯನ್ನ ಧ್ವನಿವರ್ಧಕ ಮೂಲಕ ನೀಡುತ್ತಿದ್ದಾರೆ.
ತಾಲೂಕಾ ಆಡಳಿತ ತಹಶೀಲ್ದಾರ ಡಾ. ಮೋಹನ ಭಸ್ಮೆ ಅವರುಗಳು ನೊಡಲ ಅಧಿಕಾರಿಗಳು ಗ್ರಾಮಲೇಕಾಧಿಕಾರಿ , ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಹಾಗೂ ಸಂಬಂದ ಪಟ್ಟ ಎಲ್ಲ ಅಧಿಕಾರಿಗಳು ಪ್ರವಾಹ ಎಚ್ಚರಿಕೆಯಿಂದ ನಿರ್ವಹಿಸಲು ಸನ್ನಧರಾಗಬೇಕಾಗಿ ಆದೇಶ ನೀಡಿದ್ದಾರೆ.




