ಬೆಳಗಾವಿ
ದೂದ್ಸಾಗರ ಬಳಿ ನಿಜಾಮುದ್ದಿನ್-ವಾಸ್ಕೋ ಟ್ರೈನ್ ಮೇಲೆ ಕುಸಿದ ಗುಡ್ಡ; ಪ್ರಯಾಣಿಕರ ಪರದಾಟ

ಬೆಳಗಾವಿ: ಭಾರಿ ಮಳೆಯ ಹಿನ್ನೆಲೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಚಲಿಸುತ್ತಿದ ನಿಜಾಮುದ್ದಿನ್- ವಾಸ್ಕೋ ಟ್ರೈನ್ ಮೇಲೆ ಕುಸಿದ ಗುಡ್ಡ ಕುಸಿತ ಪರಿಣಾಮ ರೈಲ್ವೆ ಟ್ರ್ಯಾಕ್ ಸಂಪೂರ್ಣ ಬಂದ್ ಆಗಿದೆ.
ಇಂದು ಬೆಳ್ಳಂಬೆಳಗ್ಗೆ ದೂದ್ ಸಾಗರ-ಸೋಲೆಂ ಹಾಗೂ ದೂದಸಾಗರ- ಕ್ಯಾಸಲ್ ರಾಕ್ ಮಧ್ಯೆ ಎರಡು ಕಡೆ ಗುಡ್ಡ ಕುಸಿತಗೊಂಡಿದ್ದು, ಗುಡ್ಡ ಕುಸಿತದಿಂದ ಯಾವುದೇ ಪ್ರಾಣಾಪಾಯ ಇಲ್ಲ. ಟ್ರ್ಯಾಕ್ ಮೇಲೆ ಬಿದ್ದ ಮಣ್ಣು ತೆರವು ಕಾರ್ಯಚರಣೆ ನೈರುತ್ಯ ರೈಲ್ವೆ ಇಲಾಖೆಯಿಂದ ನಡೆಸಲಾಗಿದೆ.
ಗುಡ್ಡ ಕುಸಿದಿರುವ ಕಾರಣ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಆದಕಾರಣ ಪ್ರಯಾಣಿಕರರಿಗೆ ಊಟ,ಉಪಹಾರದ, ಕಾಫಿ-ಟೀ ವ್ಯವಸ್ಥೆ ಮಾಡಲಾಗಿದೆ. ನೈರುತ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಅರವಿಂದ ಮಲಖಾಡೆ ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.




