ಬೆಳಗಾವಿ
ರಾತ್ರೋ ರಾತ್ರಿ ಡಿಸಿ ಭೇಟಿಯಾದ ಸೋತ ಎಂಇಎಸ್ ಅಭ್ಯರ್ಥಿಗಳು; ಮರು ಮತದಾನಕ್ಕೆ ಮನವಿ

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಂಇಎಸ್ ಮತ್ತೊಮ್ಮೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದೆ.
ಹೌದು ಬೆಳಗಾವಿ ಪಾಲಿಕೆ ಇತಿಹಾಸದಲ್ಲಿಯೇ ಎಂಇಎಸ್ ತೀರಾ ಹೀನಾಯ ಸೋಲು ಕಂಡಿದೆ. ಹೀಗಾಗಿ ವಿವಿಪ್ಯಾಟ್ ಬಳಸದೇ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ 40ಕ್ಕೂ ಹೆಚ್ಚು ಸೋತ ಎಂಇಎಸ್ ಅಭ್ಯರ್ಥಿಗಳು ರಾತ್ರೊ ರಾತ್ರಿ ಡಿಸಿ ಮಹಾಂತೇಶ ಹಿರೇಮಠ ಅವರ ನಿವಾಸಕ್ಕೆ ತೆರಳಿ ಮರು ಚುನಾವಣೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ. ಮನವಿ ಪತ್ರದಲ್ಲಿ ಕೆಲ ಕನ್ನಡ, ಉರ್ದು ಸೋತ ಅಭ್ಯರ್ಥಿಗಳು ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ.




