Breaking NewsLatestಇತರ ಕ್ರೀಡೆಕ್ರೀಡೆ
ಯುಎಸ್ ಓಪನ್: ಕ್ವಾರ್ಟರ್ ಫೈನಲ್ಗೆ ನೊವಾಕ್

ನ್ಯೂಯಾರ್ಕ್: ಸೆಟ್ ಸೋಲಿನೊಂದಿಗೆ ಆರಂಭ ಕಂಡರೂ ಅನುಭವದ ಆಟ ಪ್ರದರ್ಶಿಸಿದ ವಿಶ್ವದ ನಂ1. ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಷಿಪ್ ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಕಂಡ ಅಮೆರಿಕದ ಆಟಗಾರ ಜೆನ್ಸನ್ ಬ್ರೂಕ್ಸ್ ಬಿ ವಿರುದ್ಧ ನಡೆದ ಪಂದ್ಯದಲ್ಲಿ ಜೊಕೊವಿಕ್ 1-6, 6-3, 6-2, 6-2 ಅಂತರದಲ್ಲಿ ಜಯ ಗಳಿಸಿದರು.
ಸತತ ಎರಡು ಪಂದ್ಯಗಳಲ್ಲಿ ಮೊದಲ ಸೆಟ್ ನಲ್ಲೇ ಸೋಲುತ್ತಿರುವ ಜೊಕೊವಿಕ್ ಮುಂದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಟಲಿಯ ಮಾಟಿಯೊ ಬೆರೆಟ್ಟಿನಿ ವಿರುದ್ಧ ಸೆಣಸಲಿದ್ದಾರೆ. ನಾಳೆಯ ಪಂದ್ಯ ಕಳೆದ ಬಾರಿಯ ವಿಂಬಲ್ಡನ್ ಫೈನಲ್ ನ ಪುನರಾವರ್ತನೆ ಪಂದ್ಯವಾಗಿರುತ್ತದೆ.
