ಧಾರವಾಡದಲ್ಲಿ 10 ಅಫ್ಘಾನ್ ವಿದ್ಯಾರ್ಥಿಗಳು ಕಣ್ಣೀರು: ಕುಟುಂಬಸ್ಥರ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ

ಧಾರವಾಡ: ಈಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆ ಒಂದೊಂದು ನಗರವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅಫ್ಘಾ ನಿಸ್ತಾನ ಬಿಟ್ಟು ಬೇರೆ ಬೇರೆ ದೇಶಗಳಲ್ಲಿ ವ್ಯಾಸಾಂಗ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಲ್ಲಿರುವ ಅಘ್ಪಾನರಲ್ಲಿ ಆತಂಕ ಸೃಷ್ಠಿಯಾಗಿದೆ. ಭಾರತಕ್ಕೂ ಆಫ್ಘಾನ್ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಗಮಿಸಿದ್ದು, ಅವರ ಪೈಕಿ ವಿದ್ಯಾಕಾಶಿ ಧಾರವಾಡದಲ್ಲಿ 15 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅದರಲ್ಲಿ 10 ಜನ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಹಾಗೂ ಸ್ನಾತಕೋತ್ತರ ಪದವಿ ಓದಲು ಬಂದಿರುವ ವಿದ್ಯಾರ್ಥಿಗಳು ಇವರಾಗಿದ್ದು, ತಮ್ಮ ತಾಯ್ನಾಡಿಗೆ ಒದಗಿದ ಬಂದಿರುವ ದುಸ್ಥಿತಿ ಹಾಗೂ ಕುಟುಂಬಸ್ಥರ ಸುರಕ್ಷಿತ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಕೊವಿಡ್ ಸೋಂಕಿನ ಹೆಚ್ಚಳದಿಂದ ತರಗತಿಗಳು ನಡೆಯದ ಕಾರಣ 5 ವಿದ್ಯಾರ್ಥಿಗಳು ಮರಳಿ ಅಫ್ಘಾನಿಸ್ತಾನಕ್ಕೆ ತೆರಳಿದ್ದು, ಉಳಿದ 10 ವಿದ್ಯಾರ್ಥಿಗಳು ಧಾರವಾಡ ಕೃಷಿ ವಿವಿಯ ಅಂತರರಾಷ್ಟ್ರೀಯ ವಸತಿ ಉಳಿದುಕೊಂಡಿದ್ದಾರೆ.
ಈಗಾಗಲೇ ಕುಟುಂಬಸ್ಥರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ವಿದ್ಯಾರ್ಥಿಗಳು. ಅವರು ಸುರಕ್ಷಿತವಾಗಿರೋದಾಗಿ ಎಂದು ಹೇಳುತ್ತಿದ್ದು, ಅಲ್ಲದೇ ತಾಲಿಬಾನ್ ಯಾರಿಗೂ ಏನೂ ಮಾಡಲ್ಲ ಎಂದು ಘೋಷಿಸಿದೆ. ಅದರಿಂದ ನಾವು ಸ್ವಲ್ಪ ನಿರಾಳವಾಗಿದ್ದೇವೆ, ವಾಪಸ್ ಹೋದ 5 ವಿದ್ಯಾರ್ಥಿಗಳು ಭಾರತಕ್ಕೆ ಮರಳುವುದು ಕಷ್ಟ. ಸದ್ಯ ವಿಮಾನ ಸಂಚಾರ ಬಂದ್ ಆಗಿವೆ. ತುಂಬಾ ಭಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ಈಗ ಅಳಲು ತೊಡಿಕೊಂಡಿದ್ದಾರೆ.




