
ಮೌಂಟ್ ಮಾಂಗನೂಯಿ:| ಮೊಹಾಲಿಯ ಐ ಎಸ್ ಬಿಂದ್ರಾ ಮೈದಾನದಲ್ಲಿ ನಡೆದ ಮಹಿಳೆಯರ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 107 ರನ್ನುಗಳ ಭರ್ಜರಿ ಜಯಗಳಿಸಿದೆ. ಇಲ್ಲಿನ ಬೇ ಓವೆಲ್ ಕ್ರಿಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಭಾರತ ತಂಡ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 244 ರನ್ನುಗಳ ಭಾರೀ ಮೊತ್ತವನ್ನು ಪೇರಿಸಿತು.
ನಂತರ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮಹಿಳೆಯರ ತಂಡ ಕೇವಲ 43 ಓವರ್ಗಳಲ್ಲಿ 137 ರನ್ನುಗಳಿಗೆ ಪತನವಾಯಿತು. ಪಾಕಿಸ್ತಾನಿ ಮಹಿಳಾ ಬ್ಯಾಟರ್ಗಳನ್ನು ಭಾರತದ ಬೌಲರ್ಗಳು ನೆಲೆ ನಿಲ್ಲದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ರಾಜೇಶ್ವರಿ ಗಾಯಕ್ವಾಡ್ 31 ರನ್ನುಗಳನ್ನು ನೀಡಿ 4 ವಿಕೆಟ್ಗಳನ್ನು ಕಬಳಿಸಿ ಪಾಕ್ ಪತನಕ್ಕೆ ಕಾರಣದಾದರು. ಇದಕ್ಕೂ ಮುನ್ನ ಭಾರತ ಬ್ಯಾಟಿಂಗ್ನಲ್ಲಿ ಶಫಾಲಿ ವರ್ಮ ಖಾತೆ ತೆರೆಯುವ ಮುನ್ನವೇ ಔಟಾಗಿ ಪೆವಿಲಿಯನ್ಗೆ ಮರಳಿದಾಗ ಭಾರತ ಒತ್ತಡಕ್ಕೆ ಒಳಗಾಯಿತು. ಆದರೆ ನಂತರ ಭಾರತ ತಂಡವನ್ನು ಮಂಧಾನಾ ಮತ್ತು ದೀಪ್ತಿ ಶರ್ಮ 92 ರನ್ನುಗಳ ಜೊತೆಯಾಟವಾಡುವ ಮೂಲಕ ಚೇತರಿಕೆ ನೀಡಿದರು.




