IPL 2022ಕ್ರಿಕೆಟ್ಕ್ರೀಡೆ

ಪಂಜಾಬ್ ವಿರುದ್ಧ ಚೆನ್ನೈ ಸೋಲು


ಮುಂಬೈ: ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ಐಪಿಎಲ್ ಟಿ20 ಪಂದ್ಯದಲ್ಲಿ ಚೆನ್ನೈ ತಂಡವು 54 ರನ್ ಗಳ ಹೀನಾಯ ಸೋಲನ್ನು ಅನುಭವಿಸಿದೆ. ಇದೆ ಮೊದಲ ಬಾರಿಗೆ ಐಪಿಎಲ್ (IPL 2022) ಇತಿಹಾಸದಲ್ಲಿ ಚೆನ್ನೈ ತಂಡವು ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ ಕುಖ್ಯಾತಿಗೆ ಪಾತ್ರವಾಗಿದೆ.

ಚೆನ್ನೈ ತಂಡವನ್ನು ಪಂಜಾಬ್ ಸೋಲಿಸಿದೆ. ಈ ಋತುವಿನಲ್ಲಿ ಚೆನ್ನೈಗೆ ಇದು ಸತತ ಮೂರನೇ ಸೋಲು. ಚೆನ್ನೈನಿಂದ ಈ ಪ್ರದರ್ಶನವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಈ ಪಂದ್ಯದಲ್ಲಿ ಅವರ ಬ್ಯಾಟಿಂಗ್ ತೀವ್ರ ನಿರಾಸೆ ಮೂಡಿಸಿತು. ಮಾಜಿ ನಾಯಕ ಎಂಎಸ್ ಧೋನಿ ಮತ್ತು ಶಿವಂ ದುಬೆ ಸ್ವಲ್ಪ ಮಟ್ಟಿಗೆ ತಂಡದ ಇನ್ನಿಂಗ್ಸ್ ನಿಭಾಯಿಸಿದರು ಆದರೆ ಬೇರೆಯವರು ಏನೂ ಮಾಡಲಾಗಲಿಲ್ಲ.

ಕ್ರಿಸ್ ಜೋರ್ಡಾನ್ ಅವರನ್ನು ಔಟ್ ಮಾಡುವ ಮೂಲಕ ರಾಹುಲ್ ಚಹರ್ ಚೆನ್ನೈ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಿದರು. ಚೆನ್ನೈ ತಂಡ 126 ರನ್‌ಗಳಿಗೆ ಆಲೌಟ್ ಆಗಿ 54 ರನ್‌ಗಳಿಂದ ಸೋಲು ಕಂಡಿತು.

Spread the love

Related Articles

Leave a Reply

Your email address will not be published. Required fields are marked *

Back to top button