Breaking NewsLatestಕಲಬುರ್ಗಿ

ಮಸೀದಿ ಧ್ವನಿವರ್ಧಕ ತೆರವು ವಿಚಾರ: ರಾಜ್ ಠಾಕ್ರೆಗೆ ಶ್ರೀರಾಮಸೇನೆ ಬೆಂಬಲ

ಕಲಬುರಗಿ: ಮಹಾರಾಷ್ಟ್ರದಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕ ತೆಗೆಯುವಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕದ ಶ್ರೀರಾಮ ಸೇನೆ ಬೆಂಬಲ ವ್ಯಕ್ತಪಡಿಸಿದೆ.

ಕಲಬುರಗಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಜಾಧ್ಯಕ್ಷ ಆಂದೋಲ ಮಠದ ಸಿದ್ಧಲಿಂಗ ಸ್ವಾಮಿಜೀ, ಹಿಂದುಗಳ ಪವಿತ್ರ ಹಬ್ಬ ಯುಗಾದಿಯಂದು ರಾಜ್ ಠಾಕ್ರೆ ಮಸೀದಿಗಳ ಮೇಲಿನ ಧ್ವನಿವರ್ಧಕ ಬ್ಯಾನ್ ಮಾಡುವಂತೆ ಸಂದೇಶವನ್ನು ನೀಡಿದ್ದಾರೆ. ಸಾರ್ವಜನಿಕರ ಮೇಲಾಗುವ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಧ್ವನಿವರ್ಧಕ ಬಳಸದಂತೆ ಹಾಗೂ ಧ್ವನಿವರ್ಧಕವನ್ನು ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ ಠಾಕ್ರೆ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಅವರ ಈ ಕಾರ್ಯ ಸ್ವಾಗತಾರ್ಹ ಎಂದು ಹೇಳಿದರು.

ಕರ್ನಾಟಕದಲ್ಲೂ ಸಹ ಮಸೀದಿ ಮೇಲೆ ಹಾಕಲಾದ ಧ್ವನಿವರ್ಧಕಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ. ಧ್ವನಿವರ್ಧಕದಿಂದ ಬರುವ ಸೈರನ್ ನಿಂದಾಗಿ ಮಕ್ಕಳು, ವಿದ್ಯಾರ್ಥಿಗಳು ಅದರಲ್ಲೂ ವಯಸ್ಸಾದವರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಸಹ ಮಸೀದಿಗಳ ಮೇಲೆ ಹಾಕಲಾದ ಧ್ವನಿವರ್ಧಕಗಳನ್ನ ತೆಗೆದುಹಾಕಬೇಕು, ಇಲ್ಲವಾದರೆ ರಾಜ್ಯವ್ಯಾಪ್ತಿ ಹೋರಾಟ ನಡೆಸುವದಾಗಿ ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಸಿದ್ದಾರೆ..

Spread the love

Related Articles

Leave a Reply

Your email address will not be published. Required fields are marked *

Back to top button