Breaking NewsLatestಜಿಲ್ಲಾ ಸುದ್ದಿದಾವಣಗೆರೆ

ಬಾಡ ಗ್ರಾಮದಲ್ಲಿ ತಿಪ್ಪೆ ಸೇರಿದ ಹೈಮಾಸ್ಕ್ ದೀಪ…!

ದಾವಣಗೆರೆ: ದಾವಣಗೆರೆಯಿಂದ ಸಂತೆಬೆನ್ನೂರು ಹೋಗುವ ಮಾರ್ಗ ಮಧ್ಯೆ ಬಾಡ ಗ್ರಾಮದಲ್ಲಿ ಅಳವಡಿಸಿದ್ದ ಹೈಮಾಸ್ಕ್ ದೀಪದ ಕಂಬ ತುಕ್ಕು ಹಿಡಿದಿದ್ದು ತಿಪ್ಪೆ ಸೇರಿದೆ.

ರಸ್ತೆ ಕಾಮಗಾರಿ ವೇಳೆ ತೆರವು ಮಾಡಲಾಗಿದ್ದ ಹೈಮಾಸ್ಕ್ ಕಂಬ ಮತ್ತೆ ಯಾವಾಗ ಬೆಳಗಲಿದೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ರಾಜ್ಯ ಹೆದ್ದಾರಿಯಾದ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ‌. ಬಾಡ ಗ್ರಾಮದ ಪ್ರಮುಖ ರಸ್ತೆಯಲ್ಲಿ ವಾಹನಗಳು ಅತೀ ವೇಗವಾಗಿ ಬರುತ್ತವೆ. ನಾಲ್ಕು ರಸ್ತೆಗಳು ಇಲ್ಲಿ ಬಂದು ಸೇರುತ್ತವೆ. ಈ ದೀಪದ ಅಳವಡಿಕೆಯಿಂದ ರಾತ್ರಿ ಹೊತ್ತು ವಾಹನ ಚಾಲಕರಿಗೆ ಅನುಕೂಲವಾಗುತಿತ್ತು. ತ್ವರಿತವಾಗಿ ಬಾಡ ಗ್ರಾಮ ಪಂಚಾಯತಿಯವರು ಅಥವಾ ದಾವಣಗೆರೆ ಜಿಲ್ಲಾಡಳಿತ ಇದರ ಬಗ್ಗೆ ಗಮನಹರಿಸಿ ಬಾಡ ಗ್ರಾಮದ ವೃತ್ತದಲ್ಲಿ ಹೈಮಾಸ್ಕ್ ದೀಪ ಅಳವಡಿಸುವಂತೆ ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button