Breaking News

ಯುವ ಪತ್ರಕರ್ತನ ಕೊಲೆ ಆರೋಪಿಗಳ ಬಂಧನ

ಬೆಳಗಾವಿ: ಜಿಲ್ಲೆಯ ಘಟಪ್ರಭಾ ಹತ್ತಿರದ ರಾಜಾಪೂರ ಗ್ರಾಮದ ಯುವ ಪತ್ರಕರ್ತ ಬ್ ಶಿವಾನಂದ ಬಸಪ್ಪಾ ಕಾಚಾಗೋಳ ಅವರ ಕೊಲೆ ಪ್ರಕರಣವನ್ನು ಕೆಲವೇ ದಿನಗಳಲ್ಲಿ ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜಾಪೂರ ಗ್ರಾಮದ ಜೋತೆಪ್ಪಾ ವಿಠ್ಠಲ ಮಗದುಮ್, ಬೀರಪ್ಪಾ ನಿಂಗಪ್ಪಾ ಬಾನಸಿ ವಸಂತ ಬಮ್ಮಪ್ಪಾ ಬಮ್ಮವ್ವಗೋಳ ಬಂಧಿತರು. ಮೃತ ಶಿವಾನಂದ ಒಂದು ಹುಡಗಿಯನ್ನು ಪ್ರೀತಿಸುತ್ತಿದ್ದ ಇದೆ ವಿಷಯಕ್ಕೆ ಕೊಲೆ ನಡೆದಿದೆ.

ಇನ್ನು ಕೊಲೆ ಮಾಡಲು ಶಿವಾನಂದನ ಸ್ನೇಹಿತನೆ ಸಂಚು ರೂಪಿಸಿ ಬಲೆ ಹೆಣದಿದ್ದ, ಅಲ್ಲದೆ ಕೆಲವು ಹಣಕಾಸು ವಿಷಯಕ್ಕೆ ಸಂಬಂಧ ಕೂಡ ಕೊಲೆ ನಡೆದಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್‌ಐ ಆರ್.ಎಸ್.ಖೋತ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ವಿಚಾರಣೆ ಮುಂದುವರೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button