ಚಿಕ್ಕಮಗಳೂರು

ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ಕಾಫೀ ಗಿಡಗಳ ನಾಶ; ರೈತರ ಆಕ್ರೋಶ

ಚಿಕ್ಕಮಗಳೂರು: ಅರಣ್ಯ ಪ್ರದೇಶದ ವ್ಯಾಪ್ತಿಯೊಳಗೆ ಕಾಫಿ ಗಿಡಗಳನ್ನು ಬೆಳೆದಿದ್ದಾರೆಂಬ ಆರೋಪದ ಮೇಲೆ 4 ಎಕರೆ ಜಾಗದಲ್ಲಿ ಬೆಳೆದಿದ್ದ ಕಾಫಿಗಿಡಗಳನ್ನು ರೈತ ಕುಟುಂಬಗಳ ವಿರೋಧದ ನಡುವೆಯೇ ಅರಣ್ಯ ಇಲಾಖೆಯವರು ಕಡಿದು ನಾಶಪಡಿಸಿದ ಘಟನೆ ಮಸಗಲಿ ಗ್ರಾಮದಲ್ಲಿ ನಡೆದಿದೆ.

ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ಫಸಲುಭರಿತ ಕಾಫಿ ಗಿಡಗಳನ್ನು ನಾಶಪಡಿಸಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷವೂ ಹಲವು ಕುಟುಂಬಗಳು ಬೆಳೆದಿದ್ದ ಕಾಫಿ ಗಿಡಗಳನ್ನು ನಾಶಪಡಿಸಲಾಗಿತ್ತು. ಈಗ ಮತ್ತೆ 4 ಕುಟುಂಬಗಳ ಕಾಫಿ ಗಿಡಗಳನ್ನು ನಾಶಪಡಿಸಲಾಗಿದೆ ಎಂದು ನಿರಾಶ್ರಿತ ರೈತ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಲ್.ಬಸವರಾಜು ಆರೋಪಿಸಿದರು.

ಕಡಿದ ಗಿಡಗಳನ್ನು ವಾಹನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಕೊಂಡೊಯ್ದು ಸಾಂಕೇತಿಕ ಪ್ರತಿಭಟನೆ ನಡೆಸಿದ ಸ್ಥಳೀಯರು ಕಾಫಿ ಕೊಯ್ಲು ಮಾಡುವವರೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

211 ಕುಟುಂಬಗಳಲ್ಲಿ ಕೇವಲ 76 ಕುಟುಂಬಸ್ಥರನ್ನು ಗುರುತುಮಾಡಿ ಇನ್ನುಳಿದ 135 ಕುಟುಂಬಗಳಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಸರ್ಕಾರ 30 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಜಿಲ್ಲಾಧಿಕಾರಿಗಳು ಈ ಹಣವನ್ನು ವೈಜ್ಞಾನಿಕವಾಗಿ ಮನೆ ಹಾಗೂ ತೋಟ ಕಳೆದುಕೊಳ್ಳುವವರಿಗೆ ವಿತರಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಆವತಿ ಹೋಬಳಿ ಮಸಗಲಿ ಸಹಿತ 7 ಗ್ರಾಮದ 211 ಕುಟುಂಬಗಳು ಅರಣ್ಯ ಪ್ರದೇಶದಲ್ಲಿ 375 ಎಕರೆ ಅಕ್ರಮವಾಗಿ ಸಾಗುವಳಿ ಮಾಡಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದು ಇದಕ್ಕೆ ಅನುಗುಣವಾಗಿ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button