ರಾಧಿಕಾ ಕೈ ಹಿಡಿದ ಬಳಿಕ ಹೆಚ್ಚಾಯ್ತು ಯಶ್ ಅದೃಷ್ಟ: ಶಿವರಾಜ್ ಕುಮಾರ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಚಿತ್ರದ ಟ್ರೈಲರ್ ನಿನ್ನೆ ಓರಾಯನ್ ಮಾಲ್ ನಲ್ಲಿ ಸಾಕಷ್ಟು ಅದ್ದೂರಿಯಾಗಿ ರಿಲೀಸ್ ಆಗಿದೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೆ ಯಶ್, ರಾಧಿಕಾ ಪಂಡಿತ್ ಅವರನ್ನ ಮದುವೆಯಾದ ಬಳಿಕ ಅದೃಷ್ಟ ಹೆಚ್ಚಾಗಿದೆ ಎಂದರು.
ಕೆಜಿಎಫ್ 2 ಚಿತ್ರದ ಟ್ರೈಲರ್ ಬಿಡುಗಡೆಗೆ ಇಡೀ ಚಿತ್ರತಂಡವೇ ಆಗಮಿಸಿತ್ತು. ಈ ವೇಳೆ ಸಾಕಷ್ಟು ಹೈಲೈಟ್ ಆಗಿದ್ದ ಯಶ್ ಹಾಗೂ ನಟಿ ರಾಧಿಕಾ ಪಂಡಿತ್. ರಾಧಿಕಾ ಪಂಡಿತ್ ರ ಕೈ ಹಿಡಿದು ಬರ್ತಿದ್ರೆ ಪ್ರತಿಯೊಬ್ಬರ ನೋಟವು ಈ ಜೋಡಿ ಮೇಲೆಯೇ ಇತ್ತು.
ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ನಟ ಶಿವರಾಜ್ ಕುಮಾರ್ ನಿಜವಾಗಿ ಕೆಜಿಎಫ್ 2 ಚಿತ್ರದ ಟ್ರೈಲರ್ ಸೂಪರ್ ಆಗಿತ್ತು. ಮೊದಲಿನಿಂದಲೂ ನನಗೆ ಯಶ್ ಕಂಡ್ರೆ ತುಂಬಾ ಇಷ್ಟ. ಅವರು ನೋಡಲು ತುಂಬಾ ಹ್ಯಾಂಡ್ಸಮ್ ಆಗಿದ್ದಾರೆ. ಯಶ್ ಸಿನಿಮಾ ನೋಡಲು ನಿಜಕ್ಕೂ ತುಂಬಾ ಖುಷಿಯಾಗುತ್ತೆ. ನಾವಿಬ್ಬರು ‘ತಮಸ್ಸು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಅಲ್ಲಿಂದ ಕೆಜಿಎಫ್ ಮೂಲಕ ಬೇರೆ ಲೆವೆಲ್ಗೆ ಬೆಳೆದಿದ್ದಾರೆ. ಅದರಲ್ಲಿಯೂ ಯಶ್, ರಾಧಿಕಾ ಅವರನ್ನು ಮದುವೆಯಾದ ಮೇಲೆ ಅದೃಷ್ಟ ಹೆಚ್ಚಾಗಿದೆ ಎಂದರು.
ಯಶ್ ಹಾಗೂ ರಾಧಿಕಾ ಜೋಡಿ ತುಂಬಾ ಚೆನ್ನಾಗಿದೆ. ನಾವು ಕುಟುಂಬದ ರೀತಿ ಇದ್ದೇವೆ. ಯಶ್ ನನ್ನ ತಮ್ಮನ ರೀತಿ. ರಾಧಿಕಾ ಸಹ ನಮ್ಮ ಫ್ಯಾಮಿಲಿಗೆ ತುಂಬಾ ಹತ್ತಿರ. ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್. ನಿಜವಾಗಿಯೂ ನಾನು ಎಪ್ರಿಲ್ 14ಕ್ಕೆ ಕಾಯುತ್ತೇನೆ. ಮೊದಲ ಶೋ ನೋಡುವೆ. ಅದು ಫ್ಯಾನ್ಸ್ ಜೊತೆ ನೋಡುತ್ತೇನೆ. ಯಶ್ ಸಿನಿಮಾ ನೋಡಲು ನಾನು ತುಂಬಾ ಕಾಯುತ್ತಿದ್ದೇನೆ ಎಂದು ಮೆಚ್ಚುಗೆಯ ಮಾತನಾಡಿದ್ದರು.
